ಮೂರೇ ತಿಂಗಳಲ್ಲಿ ಬಂಗಾರದ ಬೆಲೆ 22000 ರೂ ಹೆಚ್ಚು!

ಚಿನ್ನದ ಬೆಲೆ ಹತ್ತು ಗ್ರಾಂಗೆ ಬಹುತೇಕ ಒಂದು ಲಕ್ಷದ ಸನಿಹಕ್ಕೆ ಬಂದು ತಲುಪಿದೆ. ಕಳೆದ ವರ್ಷ ಡಿಸೆಂಬರ್ 31 ರಂದು 76,162 ರೂ ಆಗಿದ್ದ ಚಿನ್ನದ ಬೆಲೆ ಜನವರಿ 18 ರಂದು 81,453 ಆಗಿತ್ತು. ಫೆಬ್ರವರಿ 27 ರಂದು 87,983 ಆಗಿ ನಂತರ ಮಾರ್ಚ್ 27 ರಂದು 88,100 ಆಗಿತ್ತು. ನಂತರ ಎಪ್ರಿಲ್ 16 ರಂದು 94560 ಆಗಿ ಅದರ ಮರುದಿನವೇ 98170 ಆಗಿತ್ತು. ಈಗ ಎಪ್ರಿಲ್ 30 ಕ್ಕೆ ಇದು ಒಂದು ಲಕ್ಷಕ್ಕೆ ತಲುಪಬಹುದು ಎನ್ನುವ ನಿರೀಕ್ಷೆ ಇದೆ.
ಎಪ್ರಿಲ್ 30 ರಂದು ಅಕ್ಷಯ ತೃತೀಯ ಇರುವುದರಿಂದ ಆವತ್ತು 10 ಗ್ರಾಂಗೆ ಒಂದು ಲಕ್ಷ ರೂಪಾಯಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಡಿಸೆಂಬರ್ 31 ರಿಂದ ಎಪ್ರಿಲ್ 16 ರ ನಡುವೆ ಮೂರುವರೆ ತಿಂಗಳಲ್ಲಿ ಬರೋಬ್ಬರಿ 22000 ರೂಪಾಯಿ ಜಾಸ್ತಿಯಾಗುವ ಮೂಲಕ ಚಿನ್ನದ ಬೆಲೆ ಏರಿಕೆಯಲ್ಲಿ ದಾಖಲೆ ನಿರ್ಮಾಣವಾಗಿದೆ.
ಸದ್ಯಕ್ಕಂತೂ ಬೆಲೆ ಇಳಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಜಗತ್ತಿನಲ್ಲಿ ಈಗ ಟ್ರೇಡ್ ವಾರ್ ನಡೆಯುತ್ತಿರುವುದರಿಂದ ಬಂಡವಾಳಷಾಹಿಗಳು ಈಗ ಸದ್ಯ ಚಿನ್ನದ ಮೇಲೆ ಹಣ ಹೂಡುತ್ತಿದ್ದಾರೆ. ಇದರಿಂದ ಚಿನ್ನದ ದರ ನಾಗಲೋಟದಿಂದ ಏರಿಕೆ ಕಾಣುತ್ತಿದೆ. ಸದ್ಯ ಚಿನ್ನದ ಮೇಲೆ ಹಣ ಹಾಕುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ನಿರ್ಧಾರ ಎಂದು ಹೇಳಲಾಗುತ್ತಿದೆ.
Leave A Reply