ಪಾಕಿಸ್ತಾನ ಟಿವಿಯಲ್ಲಿ ಸಿದ್ಧರಾಮಯ್ಯನವರ ಹೇಳಿಕೆ ಸುದ್ದಿ!

ಭಾರತದ ಕಾಶ್ಮೀರದ ಪಹಲ್ಗಾಂನ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಪಾಕ್ ಉಗ್ರಗಾಮಿಗಳು ದಾಳಿ ಮಾಡಿ 26 ಜನರ ಸಾವಿಗೆ ಕಾರಣರಾದ ಬಳಿಕ ಯಾವುದೇ ಕ್ಷಣದಲ್ಲಿಯೂ ಪಾಕಿಸ್ತಾನದ ಮೇಲೆ ಭಾರತ ಮುಗಿಬೀಳುವ ಸಾಧ್ಯತೆ ಇದ್ದು, ಈ ನಡುವೆ ಯುದ್ಧದ ಪರ ಮತ್ತು ಕೆಲವರು ಯುದ್ಧದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಯಾರೂ ಊಹಿಸಲಾರದ ವಿದ್ಯಮಾನವೊಂದು ಜರುಗಿದೆ.
ಪಾಕಿಸ್ತಾನದ ವಿರುದ್ಧ ಯುದ್ಧ ಅನಗತ್ಯ ಎಂದು ಹೇಳಿಕೆ ನೀಡಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ ಮಾತನ್ನೇ ಸುದ್ದಿಯನ್ನಾಗಿಸಿಕೊಂಡಿರುವ ಪಾಕಿಸ್ತಾನದ ಟಿವಿ ವಾಹಿನಿಯೊಂದು ಅದನ್ನೇ ಸ್ಟೋರಿ ಮಾಡಿದೆ. ಭಾರತದಲ್ಲಿಯೂ ಯುದ್ಧಕ್ಕೆ ಅಪಸ್ವರವಿದೆ ಎಂದು ಹೇಳಿರುವ ನಿರೂಪಕಿ ಅದಕ್ಕೆ ಸಾಕ್ಷಿಯನ್ನಾಗಿಸಿ ಸಿದ್ಧರಾಮಯ್ಯನವರನ್ನು ಉದಾಹರಿಸಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿಯೇ ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವುದಕ್ಕೆ ವಿರೋಧವಾಗಿದೆ ಎನ್ನುವ ಅರ್ಥದ ಸುದ್ದಿಯನ್ನು ಪಾಕಿಸ್ತಾನದ ಟಿವಿ ವಾಹಿನಿ ಪ್ರಸಾರ ಮಾಡಿದೆ. ಈ ಮೂಲಕ ಭಾರತದಲ್ಲಿ ಪಾಕ್ ಮೇಲಿನ ಯುದ್ಧದ ಬಗ್ಗೆ ಎಲ್ಲರಲ್ಲಿಯೂ ಸಹಮತವಿಲ್ಲ ಎನ್ನುವ ಸಂದೇಶವನ್ನು ಸಾರಲಾಗಿದೆ. ನಿರೂಪಕಿ ಮುಂದುವರೆದು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಯಾವ ಅಗತ್ಯವೂ ಇಲ್ಲ. ಪೆಹಲ್ಗಾಂ ಕೃತ್ಯ ಭಾರತದ ಭದ್ರತಾ ವೈಫಲ್ಯ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ ಎಂದು ಸಿದ್ಧರಾಮಯ್ಯನವರ ಫೋಟೋ ತೋರಿಸಿ ಹೇಳಿದ್ದಾರೆ. ಸಿದ್ಧರಾಮಯ್ಯನವರ ಹೇಳಿಕೆಯನ್ನು ಬಿಜೆಪಿ ಮುಖಂಡರು ವಿರೋಧಿಸಿದ್ದಾರೆ ಎಂದು ಕೂಡ ನಿರೂಪಕಿ ಸೇರಿಸಿದ್ದಾರೆ. ಸಿದ್ಧರಾಮಯ್ಯನವರು ಯುದ್ಧದ ವಿರುದ್ಧ ತಮ್ಮ ಹೇಳಿಕೆಯಿಂದ ಕರ್ನಾಟಕದಲ್ಲಿ ಸುದ್ದಿಯಲ್ಲಿದ್ದು ನಿಜ. ಆದರೆ ಅವರ ಈ ಹೇಳಿಕೆಯನ್ನು ಪಾಕಿಸ್ತಾನದ ಟಿವಿ ಚಾನೆಲ್ ಒಂದು ಸುದ್ದಿ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಪಾಕಿಸ್ತಾನದ ಮಾಧ್ಯಮದವರಿಗೆ ಇದೊಂದು ಖುಷಿಯ ಸಂಗತಿಯಾಗಿದೆ.
ಭಾರತದಲ್ಲಿ ಸಮರದ ಬಗ್ಗೆ ಏಕಧ್ವನಿ ಇಲ್ಲ ಎನ್ನುವುದನ್ನು ಅವರು ವಿಶ್ವಕ್ಕೆ ತಿಳಿಸಬೇಕಿತ್ತು. ಅದಕ್ಕೆ ಒಬ್ಬ ಪ್ರಮುಖ ನಾಯಕನ ಹೇಳಿಕೆ ಅವರಿಗೆ ಅಗತ್ತವಿತ್ತು. ಅದು ಸಿದ್ಧರಾಮಯ್ಯ ಮೂಲಕ ಅವರಿಗೆ ಸಿಕ್ಕಿದೆ.
ಆದರೆ ಈ ಹೇಳಿಕೆ ಪಾಕಿಸ್ತಾನದಲ್ಲಿ ಸದ್ದು ಮಾಡುತ್ತಿರುವುದು ಗೊತ್ತಾದ ನಂತರ ಸಿದ್ಧರಾಮಯ್ಯ ಉಲ್ಟಾ ಹೊಡೆದಿದ್ದಾರೆ. ತಾವು ಯುದ್ಧದ ವಿರುದ್ಧ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಸಿದ್ಧರಾಮಯ್ಯನವರ ಈ ಹೇಳಿಕೆಗಳಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂತರ ಕಾಯ್ದುಕೊಂಡಿದ್ದಾರೆ.
Leave A Reply