ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!

ಬಾಂಗ್ಲಾ ದೇಶದಲ್ಲಿ ಧರ್ಮ ಪ್ರಚಾರದಲ್ಲಿ ನಿರತರಾಗಿದ್ದ, ಇಸ್ಕಾನ್ ಪ್ರಮುಖರಲ್ಲಿ ಒಬ್ಬರಾದ ಚಿನ್ಮಯ್ ದಾಸ್ ಅವರು ಬಾಂಗ್ಲಾ ನ್ಯಾಯಾಲಯದಿಂದ ಬಿಡುಗಡೆಗೊಂಡಿದ್ದಾರೆ. ಅವರು ಬಾಂಗ್ಲಾ ದೇಶದ ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದರು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಕಳೆದ ಐದು ತಿಂಗಳುಗಳಿಂದ ಬಾಂಗ್ಲಾ ಜೈಲಿನಲ್ಲಿದ್ದ ಚಿನ್ಮಯ್ ದಾಸ ಅವರಿಗೆ ಬಾಂಗ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದೇಶದ್ರೋಹದ ಕಾರಣ ನೀಡಿ ಅವರನ್ನು ಬಾಂಗ್ಲಾದ ಚಿಟ್ಟಾಗೊಂಗ್ ನಲ್ಲಿ ಅಕ್ಟೋಬರ್ 30 ರಂದು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಅಕ್ಟೋಬರ್ 25 ರಂದು ಚಿಟ್ಟಾಗ್ರಾಮ್ ಎನ್ನುವ ಪ್ರದೇಶದಲ್ಲಿ ಲಾಲ್ ದಿಗ್ಗಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಂಗ್ಲಾ ದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಬಾವುಟ ಹಾರಿಸಲಾಗಿತ್ತು. ಅವರನ್ನು ಬಂಧಿಸಿದ ಅಲ್ಲಿನ ಸರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಅಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಆಗ ಚಿನ್ಮಯ್ ದಾಸ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಜಗತ್ತಿನ ಬೇರೆ ಬೇರೆ ಕಡೆ ವ್ಯಾಪಕವಾಗಿ ಪ್ರತಿಭಟನೆ ನಡೆದಿತ್ತು.
ಚಿನ್ಮಯ್ ಕೃಷ್ಣದಾಸ್ ಯಾರು?
ಚಿನ್ಮಯ್ ಕೃಷ್ಣದಾಸ್ ಅವರು ಬಾಂಗ್ಲಾದೇಶ ಸಮ್ಮಿಳಿತ ಸನಾತನಿ ಜಾಗರಣ ಸಂಘಟನೆಯ ವಕ್ತಾರರಾಗಿದ್ದರು. ಈ ಸಂಘಟನೆ ಆ ದೇಶದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ಹಕ್ಕಿನ ಬಗ್ಗೆ ಹೋರಾಟ ಮಾಡುತ್ತಾ ಬರುತ್ತಿದೆ. ಅವರು ಬಾಂಗ್ಲಾದಲ್ಲಿರುವ ಸನಾತನಿಗಳ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಚಿನ್ಮಯ್ ದಾಸ್ ಅವರು ಬಾಂಗ್ಲಾದ ಅಲ್ಪಸಂಖ್ಯಾತ ರಕ್ಷಣಾ ಕಾನೂನು, ಅಲ್ಪಸಂಖ್ಯಾತ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳಿಗೆ ಪ್ರತ್ಯೇಕವಾಗಿ ಸಚಿವಾಲಯ ಸಹಿತ ಹಿಂದೂಗಳಿಗೆ ಅಗತ್ಯವಾಗಿರುವ ವಿವಿಧ ಕಾನೂನುಗಳನ್ನು ಜಾರಿಗೆ ತರಲು ಅವರು ಒತ್ತಾಯಿಸುತ್ತಿದ್ದರು.
ದಾಸ್ ಬಾಂಗ್ಲಾ ದೇಶದಲ್ಲಿ ಹಿಂದೂಪರ ಬೃಹತ್ ರ್ಯಾಲಿಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಕ್ಟೋಬರ್ 25 ರಂದು ಚಿಟ್ಟಗೊಂಗ್ ನಲ್ಲಿ, ನವೆಂಬರ್ 22 ರಂದು ರಂಗಪುರ್ ನಲ್ಲಿ ಬೃಹತ್ ಸಮ್ಮೇಳನಗಳನ್ನು ಆಯೋಜಿಸಿ ಬಾಂಗ್ಲಾ ದೇಶದಲ್ಲಿರುವ ಸರಕಾರದ ಕೆಂಗೆಣ್ಣಿಗೆ ಗುರಿಯಾಗಿದ್ದರು.
ಅವರು ಚಿಟ್ಟಗಾಂಗ್ ನಲ್ಲಿರುವ ಸಟ್ಕಾನೀಯ ಉಪಾಜ್ಜೀಲ ಎನ್ನುವ ಗ್ರಾಮೀಣ ಭಾಗದ ಮೂಲದವರು. ಇವರು 2016 ರಿಂದ 2022 ರತನಕ ಇಸ್ಕಾನ್ ನ ಚಿಟ್ಟಗಾಂಗ್ ವಲಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ತಮ್ಮ ಪ್ರಬಲ ಧಾರ್ಮಿಕ ಭಾಷಣಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಅವರು ಶಿಶು ಬೊಕ್ತಾ ಎನ್ನುವ ನಿಕ್ ನೇಮ್ ನಿಂದ ಅಲ್ಲಿನ ಮಾಧ್ಯಮಗಳಲ್ಲಿ ಪ್ರಖ್ಯಾತರಾಗಿದ್ದಾರೆ.
Leave A Reply