ಬಲಪಂಥಿಯರ ಮೇಲೆ ಅನುಮಾನ, ಹಳ್ಳ ಹಿಡಿಯಲಿದೆಯೇ ಗೌರಿ ಹತ್ಯೆ ತನಿಖೆ?
ಬೆಂಗಳೂರು: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಕುರಿತು ಸರಕಾರ ಎಸ್‌ಐಟಿ ತನಿಖೆಗೆ ನಿರ್ಧರಿಸಿದೆ. ಅಲ್ಲದೇ ವಿಶೇಷ ತನಿಖಾ ದಳವನ್ನು ನೇಮಿಸಿದೆ. ಆದರೆ ಕೆಲವು ಚಿಂತಕರು ಯಥಾವತ್ತಾಗಿ ಎಂ.ಎಂ.ಕಲಬುರ್ಗಿ ಹತ್ಯೆಯಲ್ಲಿ ಅನುಮಾನ ವ್ಯಕ್ತಪಡಿಸಿದಂತೆ ಬಲಪಂಥಿಯ ಪ್ಯಾಸಿಸ್ಟ್‌ಗಳು ಹತ್ಯೆ ಮಾಡಿದ್ದಾರೆ ಎಂದು
ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕಲಬುರ್ಗಿ ಪ್ರಕರಣದ ತನಿಖೆ ಮಾದರಿಯಲ್ಲೇ ಗೌರಿ ಲಂಕೇಶ ಹತ್ಯೆ ತನಿಖೆಯ ಹಳ್ಳ ಹಿಡಿಯಲಿದೆಯೇ ಎಂಬ ಅನುಮಾನ ಮೂಡಿದೆ.
ಹತ್ಯೆ ಕುರಿತು ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾಾರೆ. ಆದರೆ ತನಿಖೆ ಮುಂಚೆಯೇ ಬಲಪಂಥಿಯ ವಿಚಾರಧಾರೆಗಳುಳ್ಳವರು ಹತ್ಯೆ ಮಾಡಿರಬಹುದು ಎಂದು ಕೆಲವು ವಿಚಾರವಾದಿಗಳು ಮಂಡಿಸುತ್ತಿದ್ದಾಾರೆ. ಇದರಿಂದ ತನಿಖೆ ನಿಷ್ಪಕ್ಷಪಾತವಾಗಿ ಮತ್ತು ಬೇರೆ ಬೇರೆ ಆಯಾಮಗಳಲ್ಲಿ ನಡೆಯುವುದೇ ಎಂಬ ಅನುಮಾನ ಮೂಡಿದೆ.
ತನಿಖೆಯಲ್ಲಿವೆ ಹಲವು ಆಯಾಮ
* ನಕ್ಸ್‌ಲೇಟ್‌ಗಳನ್ನು ಮುಖ್ಯವಾಹಿನಿಗೆ ತರಲು ಹೋರಾಡುತ್ತಿದ್ದ ಗೌರಿ ಲಂಕೇಶ ಇತ್ತೀಚೆಗೆ ಮಾಡಿರುವ ಟ್ವೀಟ್‌ಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.
* ಟ್ವೀಟ್‌ಗಳಲ್ಲಿ ಅವರು ಕಾಮ್ರೆಡ್‌ವೊಬ್ಬರ ಜತೆ ವಾದ ನಡೆಸಿರುವ ಅನುಮಾನ ವ್ಯಕ್ತವಾಗಿದೆ.
* ದಿಟ್ಟ ಪತ್ರಕರ್ತೆಯಾಗಿರುವ ಲಂಕೇಶ ಹಲವು ರಾಜಕಾರಣಿಗಳು, ಸಂಘಟನೆಗಳ ಮುಖ್ಯಸ್ಥರ ವಿರುದ್ಧ ವರದಿಗಳನ್ನು ಪ್ರಕಟಿಸಿದ್ದರು. ಆ ಆಯಾಮದಲ್ಲೂ ತನಿಖೆ ನಡೆಸಬಹುದು.
* ಸಹೋದರ ಇಂದ್ರಜಿತ್ ಲಂಕೇಶ ಜತೆಗೆ ಇರುವ ಆಸ್ತಿವಿವಾದದ ದಿಕ್ಕಿನಲ್ಲೂ ತನಿಖೆ ನಡೆಸಬಹುದು.
*ಬಲಪಂಥೀಯ ವಿಚಾರಗಳನ್ನು ವಿರೋಧಿಸುತ್ತಿದ್ದ, ಗೌರಿ ಹಿಂದೂ ಧರ್ಮದ ವಿರುದ್ಧ ಹಲವು ಬಾರಿ ಮಾತನಾಡಿದ್ದರು.
Leave A Reply