ಗುಹಾಗೆ ನೋಟಿಸ್ ಗುಮ್ಮಿದ ಬಿಜೆಪಿ ಯುವ ಮೋರ್ಚಾ
ಬಾಯಿಚಪಲಕ್ಕೆ ದೂಷಿಸಿ ನಂತರ ವಾಜಪೇಯಿ ಹೆಸರ ಹಿಂದೆ ಅವಿತ ಇತಿಹಾಸ ತಜ್ಞ
ದೆಹಲಿ : ಪತ್ರಕರ್ತ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಪ್ರಗತಿ ಪರ ಚಿಂತಕರು, ವಿಚಾರವಾದಿಗಳು ಹಾಗೂ ಎಡಪಂಥೀಯರಿಗೆ ಯಾರೇ ಮೈಕ್ ಹಿಡಿಯಲಿ ಬಿಡಲಿ ತಾವೇ ಖುದ್ದಾಗಿ ಹೋಗಿ ನಿಂತು ಮೈಕ್ ಹಿಡಿದು ಕೂಗಿದ್ದು”ಇದು ಬಿಜೆಪಿ ಕೆಲಸ’ ಎಂದು. ತಾವೇ ನಿರ್ಣಾಯಕರಾಗಿ, ತನಿಖೆ ಮಾಡಲು ಆರಂಭಿಸಿದ ಪೊಲೀಸರನ್ನು ನಾಚಿಸುವಂತೆ ತೀರ್ಪು ನೀಡಿಯೇ ಬಿಟ್ಟಿದ್ದರು. ಕೆಲವರು ಆರೆಸ್ಸೆಸ್ ಕಡೆ ಬೆರಳು ಮಾಡಿ ತಮ್ಮ ಹುದುಗಿದ್ದ ಬಾಯಹರುಕು ಚಪಲತನ ತೀರಿಸಿಕೊಳ್ಳಲು ತಡಮಾಡಲಿಲ್ಲ. ಅಂಥವರಲ್ಲಿ ಮುಂಚೂಣಿಯಲ್ಲಿ ನಿಂತಿದ್ದು ಸದಾ ಇತಿಹಾಸದ ಬೇರೊಂದು ಮಗ್ಗುಲನ್ನು ಹೇಳುತ್ತಾ ಪ್ರಚಾರದಲ್ಲಿರಲು ಬಯಸುವ ರಾಮಚಂದ್ರ ಗುಹಾ.
ಕಳೆದ ವಾರ ವರದಿಗಾರರನ್ನು ಕರೆಸಿ, ಮಹಾರಾಷ್ಟ್ರದಲ್ಲಿ ದಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ ಹತ್ಯೆ ಹಿಂದೆ ಯಾವ ಸಂಘ ಪರಿವಾರದವರ ಕೈವಾಡವಿದೆಯೋ, ಅವರೇ ಗೌರಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಗುಹಾ ಸಂದರ್ಶನವೊಂದರಲ್ಲಿ ಹೇಳಿಯೇ ಬಿಟ್ಟರು.
ಈಗ ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಗುಹಾ ಹೇಳಿಕೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ. ಮೂರು ದಿನದೊಳಗೆ ಒಂದು ವೇಳೆ ಷರತ್ತುಗಳಿಲ್ಲದೆ ಕ್ಷಮಾಪಣೆ ಕೇಳದಿದ್ದರೆ, ಕಾನೂನ ಹೋರಾಟಕ್ಕೆ ಸಜ್ಜಾಗಿ ಎಂಬ ಖಡಕ್ ಸಂದೇಶ ರವಾನಿಸಿದೆ.
ಆರೆಸ್ಸೆಸ್, ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾ ಓಡಾಡುವುದು ಫ್ಯಾಷನ್ ಆಗಿದೆ. ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಬಾಯಿಬಂದಂತೆ ಹರಟುವುದೇ ಶೋಕಿಯಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಹೋರಾಟವೇ ಪರಿಹಾರ ಎಂದು ಬಿಜೆಪಿ ತನ್ನ ಈ ಕ್ರಮದಿಂದ ಸಾರಿದೆ.
ವಾಜಪೇಯಿ ಜಪ ಮಾಡುತ್ತಾ ಅವಿತ ಗುಹಾ!
ನೋಟಿಸ್ ಸುದ್ದಿ ತಿಳಿಯುತ್ತಿದಂತೆ ಗುಹಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ” ಪುಸ್ತಕಕ್ಕೆ ಪುಸ್ತಕದಿಂದ, ಹೇಳಿಕೆಗೆ ಮಾತಿನಿಂದಲೇ ತಿರುಗೇಟು ನೀಡಬೇಕು ಎಂದು ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಆದರೆ ನಾವು ಈಗ ವಾಜಪೇಯಿ ಅವರ ಭಾರತದಲ್ಲಿಲ್ಲ ” ಎಂದು ಕೇಂದ್ರ ಸರಕಾರದ ಕಡೆ ಬೆರಳು ಮಾಡಿದ್ದಾರೆ.
Leave A Reply