ಅಕ್ರಮ ಮದರಸಾಗಳಿಗೆ ಅನುದಾನ ಸ್ಥಗಿತಗೊಳಿಸಿದರೆ ತಪ್ಪೇನು?
ಈ ಕಾಂಗ್ರೆಸ್‌ನವರ ಹಣೆಬರವೇ ಇಷ್ಟು. ಅವರಿಗೆ ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬುದು ಬೇಕಿಲ್ಲ. ಅವರಿಗಿರುವುದು ಒಂದೇ ಉದ್ದೇಶ, ಅದು ಅಲ್ಪ ಸಂಖ್ಯಾತರ ಓಲೈಕೆ ಹಾಗೂ ಮತ ಬ್ಯಾಂಕ್ ರಾಜಕಾರಣ.
ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿರುವ 46 ಮದರಸಾಗಳಿಗೆ ಸರಕಾರ ನೀಡುತ್ತಿರುವ ಅನುದಾನವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಗಿತಗೊಳಿಸಿದ್ದಾಾರೆ.
ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡ ಕಾಂಗ್ರೆಸ್ ಯೋಗಿ ವಿರುದ್ಧ ಆರೋಪ ಮಾಡುತ್ತಿದೆ. ಬಿಜೆಪಿ ಯಾವುದೇ ಧರ್ಮವನ್ನು ಗೌರವಿಸಿಲ್ಲ. ಕಾಂಗ್ರೆಸ್ ಮಾತ್ರ ಎಲ್ಲ ಧರ್ಮವನ್ನು ಗೌರವಿಸುತ್ತಿದೆ. ಮದರಸಾಗಳಿಗೆ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿದ್ದು ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ದೂರಿದ್ದಾರೆ.
ಆದರೆ ಉತ್ತರ ಪ್ರದೇಶದಲ್ಲಿ 560 ಮದರಸಾಗಳಿದ್ದು, ಇವುಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ 46 ಮದರಸಾಗಳಿಗಷ್ಟೇ ಅನುದಾನ ನಿಲ್ಲಿಸಲು ತೀರ್ಮಾನಿಸಲಾಗಿದೆ. ಅದೂ ವರದಿಯ ಆಧಾರದ ಮೇಲೆ ಅನುದಾನ ನಿಲ್ಲಿಸಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್‌ನವರ ಪ್ರಕಾರ ಅಕ್ರಮವಾದರೂ ಸರಿ, ಧರ್ಮಕ್ಕೆ ಸೀಮಿತವಾದುದು ಎಂದು ಅನುದಾನ ನೀಡಬೇಕೆ? ಇದು ಅಪರಾಧಕ್ಕೆ ಬೆಂಬಲ ನೀಡಿದ ಹಾಗಾಗುವುದಿಲ್ಲವೇ? ಮತ್ತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಆಗ್ರಹಿಸುವ ಕಾಂಗ್ರೆಸ್‌ನ ನಿಷ್ಠೆ ಇಷ್ಟೆಯೇ?
ಕನ್ನೌಜ್, ಖುಷಿನಗರ, ಕಾನ್ಪುರ, ಬನಾರ್, ಘಾಜಿಪುರ, ಬರಾಬಂಕಿ ಹಾಗೂ ಝಾನ್ಸಿ ಸೇರಿ ಹಲವೆಡೆ ಇದ್ದ 46 ಮದರಸಾಗಳಿಗೆ ಸರಕಾರ ಅನುದಾನ ಸ್ಥಗಿತಗೊಳಿಸಿದೆ.
Leave A Reply