• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಜನಿ ಜತೆಗೆ ರಾಜಕೀಯ ಎಂಟ್ರಿಗೆ ಸಿದ್ಧ : ಕಮಲ್

TNN Correspondent Posted On September 16, 2017
0


0
Shares
  • Share On Facebook
  • Tweet It

ಚೆನ್ನೈ : ತಿಂಗಳಾಂತ್ಯಕ್ಕೆ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತೇನೆ ಎಂದಿದ್ದ ಪಂಚಭಾಷಾ ನಟ ಕಮಲ್ ಹಾಸನ್, ಈಗ ಮತ್ತೊಂದು ಹೊಸ ಲಡ್ಡುವನ್ನು ತಮಿಳು ಸಿನಿಮಾ ರಸಿಕರ ಬಾಯಿಗೆ ಹಾಕಿದ್ದಾರೆ. ಪರದೆ ಮೇಲೆ ರಜನಿ-ಕಮಲ್ ಜೋಡಿ ಕಂಡು ಹುಚ್ಚೆದ್ದು ಕುಣಿಯುವವರು, ರಾಜಕೀಯದಲ್ಲಿಯೂ ಒಂದೇ ಪಕ್ಷದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

” ಒಂದು ವೇಳೆ ಸೂಪರ್‍ಸ್ಟಾರ್ ರಾಜಕೀಯ ಪ್ರವೇಶಿಸಿದರೆ, ಅವರೊಂದಿಗೆ ಸೇರಿ ಕೆಲಸಮಾಡಲು ನಾನು ಹಿಂದೇಟು ಹಾಕೊಲ್ಲ” ಎನ್ನುವ ಮೂಲಕ ಕಮಲ್ ರಜನಿ ಹೊಸ ಪಕ್ಷ ಕಟ್ಟಿದರೆ ತಮ್ಮ ಬೆಂಬಲವಿದೆ ಎಂದು ಪರೋಕ್ಷವಾದ ಸಂದೇಶ ರವಾನಿಸಿದ್ದಾರೆ. ತಮಿಳುನಾಡು ಜನರನ್ನು ಉದ್ದೇಶಿಸಿ” ನನಗೆ ಒಂದು ಸದೃಢ ಸಂದೇಶ ಕೊಡಿ. ನಾನು ರಜನಿ ಚಿತ್ರೋದ್ಯಮದಲ್ಲಿ ಎದುರಾಳಿಗಳಿರಬಹುದು. ಆದರೆ ಪ್ರಮುಖ ವಿಚಾರಗಳನ್ನು ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಬಹುದಾದ ಆತ್ಮೀಯತೆ ಉಳಿಸಿಕೊಂಡು ಬಂದಿದ್ದೇವೆ. ಅದರಂತೆ ರಜನಿ ರಾಜಕೀಯ ಪ್ರವೇಶದೊಂದಿಗೆ ಕೈಜೋಡಿಸದೆಯೇ ಇರುತ್ತೇನೆಯೇ?” ಎಂದು ಪ್ರಶ್ನಿಸಿದ್ದಾರೆ.


ತಮಿಳಿನಲ್ಲಿ ಬಿಗ್‍ಬಾಸ್ ಅವತರಿಣಿಕೆಯನ್ನು ನಿರೂಪಿಸುತ್ತಿರುವ ಕಮಲ್, ಮಾಸಾಂತ್ಯಕ್ಕೆ ಚಿತ್ರೀಕರಣ ಮುಗಿಸಿ ರಾಜಕೀಯದಲ್ಲಿ ಸಕ್ರಿಯರಾಗುವ ಸುಳಿವು ಸ್ಪಷ್ಟಪಡಿಸಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಕಮಲ್ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

0
Shares
  • Share On Facebook
  • Tweet It


kamal hassanmodipoliticsrajanikanthrajinirajnishruthi hassantamiltamil nadutollywood


Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
You may also like
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
ಮೇ 12 ಕ್ಕೆ ಮತದಾರ ವೆಂಟಿಲೇಟರ್ ತೆಗೆದರೆ ಕಾಂಗ್ರೆಸ್ ಕಥೆ!
May 7, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search