ಮುಸ್ಲಿಮರಿಗೆ ರಕ್ಷಣೆ ಇಲ್ಲವೆಂದವರಿಗೆ ರೋಹಿಂಗ್ಯಾಗಳ ಮೇಲೇಕೆ ಕಾಳಜಿ?
ಪ್ರಧಾನಿ ಮೋದಿ ಅಧಿಕಾರಕ್ಕೆೆ ಬಂದ ನಂತರ ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ, ನಿರಂತರವಾಗಿ ಮುಸ್ಲಿಂರ ಮೇಲೆ ಹಲ್ಲೆೆಗಳಾಗುತ್ತಿವೆ, ದೇಶದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ… ಹೀಗೆ ಸಾಲು ಸಾಲು ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೊರಿಸಿದ ಸ್ವಯಂಘೋಷಿತ ಮುಸ್ಲಿO ನಾಯಕ ಅಕ್ಬರುದ್ದೀನ್ ಓವೈಸಿ ಈಗ ರೋಹಿಂಗ್ಯಾ ಮುಸ್ಲಿಂರಿಗೆ ಭಾರತದಲ್ಲಿ ರಕ್ಷಣೆ ನೀಡಿ ಎಂದು ಘೀಳಿಡುತ್ತಿದ್ದಾನೆ.
ಆದರೆ ದೇಶದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ಬೊಬ್ಬಿರಿಯುತ್ತಿರುವವರಿಗೆ ದೇಶದಲ್ಲಿ ಅದೇಗೆ ಲಕ್ಷಾOತರ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ದೊರೆಯುತ್ತದೆ ಎಂಬ ಭರವಸೆ ಮೂಡಿದೆ. ಎಲ್ಲೇ ಗೋ ಅಕ್ರಮ ಸಾಗಣೆ ತಡೆದು, ಕೆಲವು ಹಲ್ಲೆೆಗಳಾದರೂ ಅದಕ್ಕೆೆ ಮೋದಿಯೇ ಕಾರಣ ಎಂದು ಘೀಳಿಡುವ ಅಕ್ಬರುದ್ದೀನ್ ಓವೈಸಿ ಮತ್ತು ಆತನ ಸಹೋದರ ಅಸಾದುದ್ದೀನ್ ಓವೈಸಿ ಈಗ ಮುಸ್ಲಿಮರು ಎನ್ನುವ ಏಕೈಕ ಕಾರಣಕ್ಕೆೆ ರೋಹಿಂಗ್ಯಾಗಳ ಗಡಿಪಾರಿನ ವಿಷಯದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಬಾಂಗ್ಲಾ ನುಸುಳುಕೊರರಂತೆ ಈ ರೋಹಿಂಗ್ಯಾಗಳು ಭಾರತಕ್ಕೆೆ ಕಂಟಕವಾಗದೇ ಇರರು ಎಂಬುದು ಅರ್ಥೈಸಿಕೊಳ್ಳದಷ್ಟು ಮೂರ್ಖರಂತು ಓವೈಸಿಗಳಲ್ಲ ಎಂಬುದು ವಾಸ್ತವ.
ಭಾರತದ ಮಾನವ ಹಕ್ಕು ಆಯೋಗವು ಮೈ ಕೊಡವಿ ಎದಿದ್ದು, ರೋಹಿಂಗ್ಯಾಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುತ್ತಿದೆ. ಇಲ್ಲಿ ಪದೇ ಪದೆ ಕಾಡುವ ಪ್ರಶ್ನೆೆ ದೇಶದ ರಕ್ಷಣೆ, ಏಕತೆ, ಬಹುಸಂಖ್ಯಾತರ ರಕ್ಷಣೆಗಿಂತ ಮಾನವ ಹಕ್ಕು, ಕರುಣೆ ತೋರುವುದು ಎಷ್ಟು ಸರಿ. ಹಾಗಾದರೇ ಬಹುಸಂಖ್ಯಾತರ ಹಕ್ಕುಗಳಿಗೆ ಧಕ್ಕೆೆ ಎದುರಾದರೂ ಸರಿಯೇ ಅವರಿಗೆ ರಕ್ಷಣೆ ನೀಡಬೇಕೇ?.
ಇನ್ನು ಶಾಂತಿ ದೂತ ಬುದ್ಧನ ನಾಡು ಮ್ಯಾನ್ಮಾರ್‌ನಲ್ಲೇ ರೋಹಿಂಗ್ಯಾ ಮುಸ್ಲಿಮರನ್ನು ಹೊರ ಹಾಕುತ್ತಿದ್ದಾರೆ ಎಂದರೆ ಅವರು ದೇಶಕ್ಕೆೆ ಅದಾವ ಮಟ್ಟಕ್ಕೆೆ ಕಂಠವಾಗಿರಬಹುದು ಎಂಬುದು ವಿಚಾರ ಮಾಡಲೇ ಬೇಕಾದ ವಿಷಯ. ಒಂದಿಡೀ ಸರಕಾರವೇ ‘ಆಪರೇಷನ್ ವಿಮೋಚನ’ ಹೆಸರಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅದಕ್ಕಾಗಿ ಅವರು ಭಾರತಕ್ಕೆೆ ಓಡಿ ಬರುತ್ತಿದ್ದಾರೆ. ಒಂದು ರಾಷ್ಟ್ರ ತನ್ನಲಿರುವ 10 ಲಕ್ಷ ಜನರನ್ನು ಒಕ್ಕೆೆಲ್ಲೆೆಬಿಸಲು ಪ್ರಯತ್ನಿಸುತ್ತಿದೆ ಎಂದರೆ ಅವರ ಪೂರ್ವಾಪರಗಳನ್ನು ಯೋಚಿಸಿ, ನಿರ್ಧಾರ ಕೈಗೊಳ್ಳುವುದು ಉಚಿತವಲ್ಲವೇ.
ದೇಶದಲ್ಲಿ ಸುಮಾರು ನಾಲ್ಕು ಸಾವಿರ ರೋಹಿಂಗ್ಯಾಗಳಿದ್ದಾರೆ ಎಂಬ ವರದಿ ಇದೆ. ವಿಶ್ವಾದ್ಯಂತ 11 ಲಕ್ಷ ರೋಹಿಂಗ್ಯಾಾಗಳು ಇದ್ದಾರೆ ಎನ್ನಲಾಗುತ್ತಿದೆ. ಹಾಗಾದರೇ ವಿಶ್ವದ ಎರಡನೇ ಅತಿ ದೊಡ್ಡ ಧರ್ಮವಾಗಿರುವ ಇಸ್ಲಾOಗೆ ಮತ್ತು ಇಸ್ಲಾO ರಾಷ್ಟ್ರಗಳಿಗೆ 11 ಲಕ್ಷ ರೋಹಿಂಗ್ಯಾ ಮುಸ್ಲಿಮರನ್ನು ಸಾಕಲು ಆಗುವುದಿಲ್ಲವೇ. ಅದೇಕೆ ಹಿಂದೂ ಸ್ಥಾನದಲ್ಲೇ ಆಶ್ರಯ ಪಡೆಯಬೇಕು ಎಂದು ಘೀಳಿಡುವುದು, ಗೋಳಾಡುವುದು. ಅದರ ಜತೆ ಅವರನ್ನು ಬೆಂಬಲಿಸುವವ ಓವೈಸಿಗಳು, ಬುದ್ಧಿಜೀವಿಗಳು, ಪ್ರಗತಿಪರರ, ಅಜಾದಿ ಎಂದು ನೂರಾರು ಜನರ ಮಾರಣ ಹೋಮಕ್ಕೆೆ ಕಾರಣವಾದವರನ್ನು ಬೆಂಬಲಿಸುವ ವಿಚಾರ‘ವ್ಯಾದಿ’ಗಳು ಹಿಂದೂಸ್ಥಾನದಲ್ಲೇಕೆ ಅವರಿಗೆ ಆಶ್ರಯ ನೀಡಬೇಕು ಎಂಬ ದರ್ದು ಬೆಳೆಸಿಕೊಳ್ಳಬೇಕು?
ಪ್ರದ್ಯುಮ್ನ
Leave A Reply