ನಿಲ್ಲದ ಮುಸ್ಲಿಮರ ಉಪಟಳ: ಫೋನ್ ಮೂಲಕ ಮಹಿಳೆಗೆ ತಲಾಖ್
ಜೈಪುರ: ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದರೂ, ದೇಶದಲ್ಲಿ ಕೆಲವು ಮುಸ್ಲಿಮರ ಉಪಟಳ ನಿಲ್ಲದಂತಾಗಿದ್ದು, ರಾಜಸ್ಥಾನದ ಜೋಧಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಫೋನಿನಲ್ಲಿ ಕರೆ ಮಾಡಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ಪತಿ ಇನ್ನೊಂದು ಮದುವೆಯಾಗಿದ್ದು, ಸೆ.18ರಂದು ಕರೆ ಮಾಡಿ ಮೂರು ಬಾರಿ ತಲಾಖ್ ಎಂದು ವಿಚ್ಛೇದನ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.
ಆದಾಗ್ಯೂ, ಅಫ್ಸಾನಾ ಹಾಗೂ ಮುನ್ನಾ ಎಂಟು ವರ್ಷಗಳ ಹಿಂದೆ ಜೋಧಪುರದಲ್ಲಿ ಮದುವೆಯಾಗಿದ್ದು, ಮುನ್ನಾ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಒಮ್ಮೆಯಂತೂ ಹಣಕ್ಕಾಗಿ ಪೀಡಿಸುತ್ತ, ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದ ಎಂದು ಅಫ್ಸಾನಾ ಹೇಳಿದ್ದಾರೆ.
ಅಫ್ಸಾನ ಎರಡು ಮಕ್ಕಳ ತಾಯಿಯಾಗಿದ್ದು, ನ್ಯಾಯ ಒದಗಿಸುವಂತೆ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದಾರೆ.
ಇಷ್ಟಾದರೂ, ಯಾವುದೇ ಪ್ರಗತಿಪರರು, ಬುದ್ಧಿಜೀವಿಗಳು, ಮಹಿಳಾ ಆಯೋಗದವರು ಯಾರೂ ಅಫ್ಸಾನಾ ಸಹಾಯಕ್ಕೆ ಬಂದಿಲ್ಲ ಎಂಬುದೇ ಇಬ್ಬಂದಿತನಕ್ಕೆ, ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೇ ಬೆಲೆ ಕೊಡದ ಇಂಥ ಮುಸ್ಲಿಮರ ವಿರುದ್ಧ ಕ್ರಮದ ಕೈಗೊಳ್ಳಬೇಕು.
Leave A Reply