• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚುನಾವಣೆಗಳಾಚೆಗೆ ಪ್ರಜಾಪ್ರಭುತ್ವ ಕಾಣಿರಿ : ಮೋದಿ ಕಿವಿಮಾತು

TNN Correspondent Posted On September 26, 2017
0


0
Shares
  • Share On Facebook
  • Tweet It

*ಕಾರ್ಯಕಾರಣಿಯಲ್ಲಿ ಬಿಜೆಪಿ ಬಲ *

13 ಸಿಎಂಗಳು, 6 ಡಿಸಿಎಂಗಳು, 232 ಸಚಿವರು, 65 ಕೇಂದ್ರ ಸಚಿವರು, 1515 ಶಾಸಕರು/ಎಂಎಲ್ಸಿಗಳು, 334 ಸಂಸದರು

>> ಪಕ್ಷಕ್ಕಿಂತ ದೇಶ ಮುಖ್ಯ.
>> ಭ್ರಷ್ಟಾಚಾರ , ಕಪ್ಪುಹಣ ಶೇಖರಣೆಗೆ ಕ್ಷಮೆಯಿಲ್ಲ.
>> ಮುಲಾಜಿಲ್ಲದೇ ಕ್ರಮ, ನನಗೆ ಯಾರೂ ಸಂಬಂಧಿಕರಲ್ಲ. ಸಂಬಂಧಿಕರೂ ಇಲ್ಲ.

ನವದೆಹಲಿ : ನನಗೆ ಯಾರೂ ಸಂಬಂಧಿಗಳಿಲ್ಲ. ಪಕ್ಷಕ್ಕಿಂತ ನನಗೆ ದೇಶವೇ ಮುಖ್ಯ. ಯಾರೇ ಭ್ರಷ್ಟಾಚಾರ ಮತ್ತು ಕಪ್ಪು ಹಣ ಶೇಖರಣ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಕಾಪಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಸಂಸದರು, ಶಾಸಕರು ಮತ್ತು ಕಾರ್ಯಕರ್ತರೆಂದು ಮುಲಾಜಿಲ್ಲದೇ ಯಾರೇ ಭ್ರಷ್ಟರಾದರೂ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಮೋದಿ ಗುಡುಗಿದ್ದಾರೆ.

ಸುಮಾರು 2 ಸಾವಿರಕ್ಕೂ ಅಧಿಕ ಬಿಜಪೆಇ ಮುಖಂಡರು ಭಾಗವಹಿಸಿದ್ದ ಕಾರ್ಯಕಾರಿಣಿಯಲ್ಲಿ ಮೋದಿ ಅವರ ಮಾತುಗಳನ್ನು ಮಾಧ್ಯಮದವರಿಗೆ ಕಾರ್ಯಕಾರಿಣಿಯ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ಗೋಷ್ಠಿಯಲ್ಲಿ ವಿವರಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮತ್ತು ಕಪ್ಪುಹಣ ನಿಗ್ರಹ ಅಜೆಂಡಾದಲ್ಲಿಯೇ ಇರಲಿಲ್ಲ. ಕೆಲವೊಮ್ಮೆ ನಮ್ಮ ಸರ್ಕಾರವನ್ನು ಟೀಕಿಸಲು ಪದಗಳೇ ಸಿಗದಿದ್ದಾಗ ಕಾಂಗ್ರೆಸ್‍ನ ಹಿರಿಯ ಮುಖಂಡರೂ ಸೇರಿದಂತೆ ಅನೇಕರು ನಿಕೃಷ್ಟ ಪದ ಬಳಕೆಯಿಂದ ನಿಂದಿಸಿ ತೃಪ್ತಿಪಟ್ಟುಕೊಳ್ಳುತ್ತಾರೆ ಎಂದು ಮೋದಿ ದಿಗ್ವಿಜಯ್ ಮತ್ತು ಮನೀಷ್ ತಿವಾರಿ ಟ್ವೀಟ್‍ಗೆ ಕುಟುಕಿದ್ದಾರೆ.

ಮೋದಿ ಮಾತುಗಳು—>
* ಕೇವಲ ಚುನಾವಣೆಯ ಗೆಲುವಿಗಾಗಿ ಶ್ರಮಿಸಬೇಡಿ. ಕಾರ್ಯಕರ್ತರು, ಶಾಸಕರು, ಸಂಸದರೆಲ್ಲರೂ ಎನ್‍ಡಿಎ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಶ್ರಮಿಸಿ.

* ಜನರ ಪಾಲ್ಗೊಳ್ಳುವಿಕೆ ಇಲ್ಲದೇ ಯಾವುದೇ ಯೋಜನೆಯೂ ಯಶಸ್ವಿಯಾಗುವುದಿಲ್ಲ.

………………………………………………………………….

ಸೌಭಾಗ್ಯ ಯೋಜನೆಗೆ ಚಾಲನೆ, ಉರ್ಜಾ ಭವನ ಉದ್ಘಾಟನೆ

ಡಿಸೆಂಬರ್2018ರೊಳಗೆ ನಾಲ್ಕು ಕೋಟಿಗೂ ಅಧಿಕ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದ ಸೌಲಭ್ಯ ಕಲ್ಪಿಸುವ ಮೂಲಕ ಮಾರ್ಚ್ 2019ರೊಳಗೆ ದೇಶಾದ್ಯಂತ ಎಲ್ಲ ನಾಗರಿಕರಿಗೂ 100% ವಿದ್ಯುತ್ ನೀಡುವ ಗುರಿಯೊಂದಿಗೆ ಸೌಭಾಗ್ಯ ಹೆಸರಿನ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ.

ರು. 16, 320 ಕೋಟಿ ವೆಚ್ಚದ ಯೋಜನೆ ಇದು. ಪ್ರಧಾನ ಮಂತ್ರಿ ಸಹಜ ಬಿಜ್ಲಿ ಹರ್ ಘರ್ ಯೋಜನೆ ಅಥವಾ ಸೌಭಾಗ್ಯ ಯೋಜನೆಗಿಂತ ಮುಂಚೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮೂಲಕ 18 ಸಾವಿರ ಹಳ್ಳಿಗಳ ಪೈಕಿ 78% ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಸರ್ಕಾರಿ ಸ್ಚಾಮ್ಯದ ತೈಲ ಕಂಪನಿ ಒಎನ್‍ಜಿಸಿಯ ನೂತನ ಕಾರ್ಪೊರೇಟ್ ಕಚೇರಿ ದೀನ್ ದಯಾಳ್ ಉಪಾಧ್ಯಾಯ ಉರ್ಜಾ ಭವನವನ್ನು ದೆಹಲಿಯಲ್ಲಿ ಪ್ರಧಾನಿ ಉದ್ಘಾಟಿಸಿದರು.

 

0
Shares
  • Share On Facebook
  • Tweet It


bjpcongressgaslpgmodinational executivendasaubhagya


Trending Now
ಕೇರಳ ಇನ್ನು ಮುಂದೆ ಕೇರಳಂ!
Tulunadu News February 24, 2026
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Tulunadu News February 19, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
  • Popular Posts

    • 1
      ಕೇರಳ ಇನ್ನು ಮುಂದೆ ಕೇರಳಂ!
    • 2
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 3
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search