ಪಾಕಿಸ್ತಾನ ಬೆಂಬಲಿಸುವ ಚೀನಾ ಎಂಥ ಮುಸ್ಲಿಂ ದ್ವೇಷಿ ಎಂಬುದು ಗೊತ್ತೇ?
ಚೀನಾ ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಎಂಬ ಕಾರಣಕ್ಕಾಗಿ ಚೀನಾವನ್ನು ಬೆಂಬಲಿಸುವ ಮುಸ್ಲಿಮರಿದ್ದಾರೆ. ಆದರೆ ಚೀನಾ ಎಷ್ಟರಮಟ್ಟಿಗೆ ಮುಸ್ಲಿಮರನ್ನು ದ್ವೇಷಿಸುತ್ತದೆ ಎಂಬುದು ಎಷ್ಟು ಮುಸ್ಲಿಮರಿಗೆ, ಪಾಕಿಸ್ತಾನಕ್ಕೆ ಗೊತ್ತಾ?
ಹೌದು, ಚೀನಾದ ಕ್ಸಿನ್ ಜಿಯಾಂಗ್ ಎಂಬ ಪ್ರದೇಶದಲ್ಲಿ ಸರಕಾರ ಮುಸ್ಲಿಮರ ವಿರುದ್ಧ ಅಭಿಯಾನ ನಡೆಸಿದೆ. ಮುಸ್ಲಿಮರು ಇಸ್ಲಾಂಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಮಸೀದಿಗಳನ್ನು ಸಹ ಕೆಡವಬೇಕು ಎಂದು ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ಮುಸ್ಲಿಮರು ಇಸ್ಲಾಂಗೆ ಸಂಬಂಧಿಸಿದ ಯಾವುದೇ ವಸ್ತು, ಪ್ರಾರ್ಥನಾ ಸಲಕರಣೆ, ಕುರಾನ್ ಗಳನ್ನು ಸರಕಾರದ ವಶಕ್ಕೆ ನೀಡಬೇಕು. ಇಲ್ಲದಿದ್ದರೆ ಶಿಕ್ಷೆ ನೀಡಲಾಗುತ್ತದೆ ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆ ಸೇರಿ ಯಾವುದೇ ವಿಷಯಗಳಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾದಾಗ ಅಡ್ಡ ಬಂದು ಪಾಕ್ ಬೆಂಬಲಿಸುವ ಚೀನಾ ಮುಸ್ಲಿಮರ ಪರ ಎಂದೇ ಬಹುತೇಕ ಮುಸ್ಲಿಮರು ಭಾವಿಸಿದ್ದರು ಹಾಗೂ ಚೀನಾ ಪರ ನಿಲ್ಲುತ್ತಿದ್ದರು. ಆದರೆ ತನ್ನ ದೇಶದಲ್ಲೇ ಇರುವ ಮುಸ್ಲಿಮರ ವಿರುದ್ಧ ಚೀನಾ ಅಭಿಯಾನ ಆರಂಭಿಸಿದೆ ಎಂಬುದು ಅವರ ಕುತ್ಸಿತ ಮನಸ್ಸಿಗೆ ಹಿಡಿದ ಕನ್ನಡಿ.
ಅಷ್ಟೇ ಅಲ್ಲ, ರೋಹಿಂಗ್ಯಾ ಮುಸ್ಲಿಮರ ವಿಷಯದಲ್ಲೂ ಚೀನಾ ಸೊಲ್ಲೆತ್ತುತ್ತಿಲ್ಲ ಎಂಬುದು ಸಹ ಮುಸ್ಲಿಮರಿಗೆ ನೆನಪಿರಲಿ, ಚೀನಾ ಬೆಂಬಲಿಸುವ ಮುನ್ನ ಯೋಚಿಸಿ.
Leave A Reply