• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

1 ಲಕ್ಷ ಡೇರಾ ಅನುಯಾಯಿಗಳಿಂದ ಇಸ್ಲಾಂ ಮತಾಂತರದ ಬೆದರಿಕೆ

TNN Correspondent Posted On October 3, 2017
0


0
Shares
  • Share On Facebook
  • Tweet It

>> ವಿಡಿಯೊ ಹರಿಬಿಟ್ಟ ಡೇರಾ ವಕ್ತಾರ ಸಂದೀಪ್ ಮಿಶ್ರಾ
>> ಹಿಂದು ಎಂದು ಬಾಬಾ ಟಾರ್ಗೆಟ್ ಆಗಿದ್ದಾರೆ, ಮುಸ್ಲಿಮರು ಕಲ್ಲು ಹೊಡೆದರೂ ಕೇಳೊರಿಲ್ಲ
>> ಹನಿ ಸಿಗ್ತಿಲ್ಲ, ಮನಿ ಮುಟ್ಟಂಗಿಲ್ಲ, ಕೋಮುಗಲಭೆಗೆ ಬಾಬಾ ಸ್ಕೆಚ್

ಚಂಡೀಗಡ : ನಡುಬೀದಿಯಲ್ಲಿ ಹರಾಜಾಗುತ್ತಿರುವ ಡೇರಾ ಸಚ್ಚಾ ಸೌದ ಎಂಬ ರೇಪಿಸ್ಟ್ ಬಾಬಾ ರಾಮರಹೀಮನ ಸಾಮ್ರಾಜ್ಯದ ಮಾನ ಕಾಪಾಡಲು ಆತನ ಭಕ್ತರು ಎನಿಸಿಕೊಂಡ ಕಳಂಕಿತರು ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರವಾಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತನ್ನ ಗುರು 20 ವರ್ಷ ಜೈಲು ಪಾಲಾಗಿ, ಡೇರಾದಲ್ಲಿ 600ಕ್ಕೂ ಹೆಚ್ಚು ಅಸ್ಥಿಪಂಜರಗಳು ಸಿಕ್ಕಿರುವ ಬೆನ್ನಲ್ಲೇ ಕಾನೂನು ಕುಣಿಕೆ ಕುತ್ತಿಗೆಗೆ ಬೀಳುವ ಸತ್ಯಕ್ಕೆ ಹೆದರಿ ಇಸ್ಲಾಂ ಹಿಂದೆ ಹೋಗಿ ಅವಿತಿದ್ದಾರೆ.

ಸಾಲದೆಂಬಂತೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಒಂದು ಲಕ್ಷ ಅನುಯಾಯಿಗಳು ಮತಾಂತರವಾಗಲಿದ್ದೇವೆ. ಹಿಂದುಗಳು ಎಂದು ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಡೇರಾ ವಕ್ತಾರ ಸಂದೀಪ್ ಮಿಶ್ರಾ ವಿಡಿಯೊ ಮಾಡಿ ಬಿಟ್ಟಿದ್ದಾನೆ. ಮುಸುಕು ಧರಿಸಿದ ಮಹಿಳೆ ಜೊತೆಗೆ ಮಾತುಕತೆ ನಡೆಸುತ್ತಿರುವಂತೆ ನಾಟಕ ಮಾಡಿರುವ ಸಂದೀಪ್ ಹಿಂದುಸ್ತಾನ ಎಂದರೆ ನಿಮ್ಮ ಕಣ್ಣಲ್ಲಿ ನೀರು ಬರುವವರೆಗೆ ಗೋಳು ಹೊಯ್ದುಕೊಳ್ಳುತ್ತಾರೆ. ಕಲ್ಲು ಹೊಡೆಯುವ ಮುಸ್ಲಿಮರನ್ನು ಯಾರೂ ಮುಟ್ಟುವುದಿಲ್ಲ ಎಂದು ಸಂಭಾಷಣೆ ನಡೆಸಿದ್ದಾನೆ. ಮತಾಂತರ ನಂತರ ವಿದೇಶಕ್ಕೆ ಹಾರುತ್ತೇವೆ ಎಂದು ಕೂಡ ದಡಬಡಾಯಿಸಿದ್ದಾನೆ.

ಬಾಬಾ ರಾಮರಹೀಮ್ ಕೋಮುಗಲಭೆಯಿಂದ ತನ್ನ ಪ್ರಭಾವ ತೋರಿಸಲಿ ಜೈಲಿನಿಂದಲೇ ಅನುಯಾಯಿಗಳಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಬಾಬಾ ಸಂಬಂಧಿ ಭುಪಿಂದರ್ ಸಿಂಗ್ ಗೊರಾ ಹೇಳಿದ್ದಾರೆ.

0
Shares
  • Share On Facebook
  • Tweet It


ashrambabaderagurmeetgurumeetharyanahoneyindiamishramodipreetpunjabraheemrahimramrapesachasachchcasadhvisandeepsaudasexsinghyogi


Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search