ರಸ್ತೆ ಅಪಘಾತದಲ್ಲಿ ಕೇರಳ ವಿದ್ಯಾರ್ಥಿಗಳ ಸಾವು
Posted On October 7, 2017

ಬೆಂಗಳೂರು : ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳು ರಾಮನಗರ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೇಕಬ್, ದಿವ್ಯಾ, ನಿಖೀತ್ ಮತ್ತು ಜೀನಾ ಎಂದು ಮೃತರನ್ನು ಗುರುತಿಸಲಾಗಿದ್ದು, ಆ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಮತ್ತಿಬ್ಬರು ತಮಿಳುನಾಡಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೈಸೂರಿನಿಂದ ಬರುತ್ತಿದ್ದಾಗ ಕಾರು ಓಡಿಸುತ್ತಿದ್ದ ವಿದ್ಯಾರ್ಥಿಯ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಕಾರು ಗುದ್ದಿ ಸಿಕ್ಕಿ ನಿಂತಿದೆ. ಹಿಂದಕ್ಕೆ ಎಳೆಯಲು ಅನುವಾಗುವಷ್ಟರಲ್ಲಿ ಹಿಂದಿನಿಂದ ಟ್ರಕ್ ಬಂದು ಗುದ್ದಿದ ಕಾರಣ ನಜ್ಜುಗುಜ್ಜಾದ ಕಾರು ವಿದ್ಯಾರ್ಥಿಗಳನ್ನು ಬಲಿ ಪಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಜೇಕಬ್ ಮತ್ತು ದಿವ್ಯಾ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
- Advertisement -
Leave A Reply