ದೇಶಸೇವೆಗೆ ಹುಟ್ಟೂರಿನ ಜನರ ಪ್ರೀತಿಯೇ ಕಾರಣ: ಮೋದಿ
Posted On October 9, 2017
ಗಾಂಧಿನಗರ: ನಾನು ದೇಶಕ್ಕಾಗಿ ದುಡಿಯಲು ಹುಟ್ಟೂರಿನ ಜನರ ಸಹಕಾರ ಹಾಗೂ ಇಲ್ಲಿನ ಮಣ್ಣೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಾದ ಮೆಹ್ಸಾನ ಜಿಲ್ಲೆಯ ವಡನಗರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಇದೇ ಮಣ್ಣು ನನ್ನಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸಿದೆ. ಅಲ್ಲದೆ ಹೆಚ್ಚು ಸ್ಫೂರ್ತಿಯಿಂದ ಕೆಲಸ ಮಾಡಲು ವಡನಗರದ ಜನರ ಪ್ರೀತಿ ಸಹಕಾರವೇ ಚೈತನ್ಯ ಮೂಡಿಸಿದೆ ಎಂದರು.
ಇನ್ನೇನು ಗುಜರಾತ್ ನಲ್ಲಿ ವಿಧಾನಸಭೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಗುಜರಾತ್ ಭೇಟಿ ಗಮನ ಸೆಳೆದಿದೆ. ಮೋದಿ ವಡನಗರದಲ್ಲಿ ರೋಡ್ ಶೋ ನಡೆಸಿದರು. ಅವರನ್ನು ನೋಡಲು ರಸ್ತೆಯುದ್ದಕ್ಕೂ ಜನ ನಿಂತಿದ್ದರು. ಮೋದಿ ಮೋದಿ ಎಂಬ ಝೇಂಕಾರ ಮೊಳಗುತ್ತಿತ್ತು. ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲು ಇಡೀ ನಗರವನ್ನು ಸಿಂಗರಿಸಲಾಗಿತ್ತು.
ಆದಾಗ್ಯೂ ಮೋದಿ ಎರಡು ದಿನದ ಗುಜರಾತ್ ಭೇಟಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply