ಜಾತ್ಯತೀತ ವಾದಿ ಸೋಗಲಾಡಿಗಳೇ ಈಗೆಲ್ಲಿದ್ದೀರಿ, ಇದನ್ನು ಖಂಡಿಸುವ ತಾಕತ್ತಿದೆಯಾ ನಿಮಗೆ?
ಬಸವಣ್ಣನವರು 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿ ಮೇಲ್ಪಂಕ್ತಿ ಹಾಕಿದರು ನಿಜ. ಆದರೆ ಆಗಲೂ ಅದನ್ನು ಕೆಲ ಕುತ್ಸಿತ ಮನಸ್ಸುಗಳು ವಿರೋಧಿಸಿದ್ದವು ಎಂಬುದೂ ನಿಜ.
ಈ ಜಾತ್ಯತೀತವಾದ, ಅಂತರ್ಜಾತಿ ವಿವಾಹ ಪ್ರಚಾರದ ಸರಕಾಗಿದ್ದೂ ಅಷ್ಟೇ ನಿಜ. ಅದಕ್ಕಾಗಿಯೇ ಕೆಲವರು ಬ್ರಾಹ್ಮಣರು ದಲಿತರನ್ನು ಮದುವೆಯಾಗಲಿ ನೋಡೋಣ ಎಂದು ಬಾಯಿಯ ತಲುಬು ತೀರಿಸಿಕೊಳ್ಳುತ್ತಾರೆ. ಆದರೆ ಅದೇ ಮುಸ್ಲಿಮರು ಹಿಂದೂಗಳನ್ನು ಮದುವೆಯಾಗಿ, ಮೆಹಬೂಬ್ ಇದ್ದುದನ್ನು ರಾಮಣ್ಣನಾಗಿ ಬದಲಾಗಲಿ ಎನ್ನಲು ತಾಕತ್ತಿರುವುದಿಲ್ಲ.
ಆದರೂ ಕೇರಳದಲ್ಲಿ ಮುಸ್ಲಿಂ ಕುಟುಂಬವೊಂದು ನಿಜವಾದ ಜಾತ್ಯತೀತತನ ಮೆರೆದು ಅಂತರ್ಜಾತಿಯ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇಂಥ ವಿವಾಹ ಮಾಡಿಸುತ್ತಿದೆ. ಆದರೆ ಮುಸ್ಲಿಂ ಮೂಲಭೂತವಾದಿಗಳು ಇದನ್ನು ಸಹಿಸದೆ ಇಡೀ ಕುಟುಂಬವನ್ನೇ ಸಮಾಜದಿಂದ ಬಹಿಷ್ಕಾರ ಮಾಡಿದ್ದಾರೆ.
ಕುನ್ನುಮ್ಮಲ್ ಯೂಸುಫ್ ಹಾಗೂ ಅವರ ಕುಟುಂಬ ಅಂತರ್ಜಾತಿಯ ವಿವಾಹ ಬೆಂಬಲಿಸುತ್ತಿದೆ. ಬರೀ ಬಾಯಿ ಮಾತಿಗಷ್ಟೇ ಮಾಡದೆ, ಬೇರೆಯವರ ಮಕ್ಕಳನ್ನ ಬೇರೆ ಜಾತಿಯವರಿಗೆ ಮದುವೆ ಮಾಡಿ ಕೊಡದೆ, ತಮ್ಮ ಮನೆಯ ಹೆಣ್ಣುಮಕ್ಕಳನ್ನು ಹಿಂದೂ ಸೇರಿ ನಾನಾ ಮುಸ್ಲಿಮೇತರರಿಗೆ ಮದುವೆ ಮಾಡಿಕೊಟ್ಟಿದೆ.
ಇದನ್ನು ಸಹಿಸದ ಮದುರಲ್ ಇಸ್ಲಾಂ ಸಂಘಮ್ಸ್ ಮಹಲ್ಲು ಸಮಿತಿ ಎಂಬ ಮಸೀದಿ ಆಡಳಿತ ಕಮಿಟಿ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಿದೆ. ಅಲ್ಲದೆ, ಸಮಿತಿ ಜತೆಗೆ ಕುಟುಂಬಕ್ಕಿದ್ದ ನಂಟನ್ನು ಕಿತ್ತುಹಾಕಿ ನೋಟಿಸ್ ನೀಡಿದೆ.
ಅಲ್ಲ ಸ್ವಾಮಿ, ಜಾತ್ಯತೀತವಾದವನ್ನು ಬೆಂಬಲಿಸುವವರು, ಬೇರೊಬ್ಬರಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕುವವರು, ಸ್ವತಃ ತಂದೆಯೇ ಒಪ್ಪಿ ತಮ್ಮ ಮಗಳನ್ನು ಬೇರೆ ಧರ್ಮೀಯರೊಂದಿಗೆ ಮದುವೆ ಮಾಡಿಕೊಟ್ಟರೆ ನಿಮಗೇನು ತ್ರಾಸ? ಇದು ಹೇಗೆ ಇಸ್ಲಾಮಿಗೆ ವಿರೋಧವಾಗುತ್ತದೆ ಹಾಗೂ ಸಾಮಾಜಿಕ ಬಹಿಷ್ಕಾರ ಮಾಡುವ ತಪ್ಪಾಗುತ್ತದೆ?
ಇಷ್ಟಾದರೂ ಬಸವ ತತ್ವವಾದಿಗಳು, ಪ್ರತ್ಯೇಕ ಧರ್ಮ ಮಾಡಬೇಕು ಎನ್ನುವವರು, ಜಾತ್ಯತೀತವಾದಿಗಳು ಸೊಲ್ಲೆತ್ತುತ್ತಿಲ್ಲ? ಯಾರೂ ಏಕೆ ಇಸ್ಲಾಂ ಧರ್ಮಗುರುಗಳ ಈ ಅಸಹಿಷ್ಣುತೆಯನ್ನು ವಿರೋಧಿಸಲ್ಲ? ಯಾವ ಮಾಧ್ಯಮಗಳೂ ಇದನ್ನೇಕೆ ಬಿತ್ತರಿಸಲ್ಲ? ಯಾವ ಬರ್ಖಾ ದತ್, ರಾಜ್ ದೀಪ್ ಸರ್ದೇಸಾಯಿ, ಯಾವ ಕಾಂಗ್ರೆಸ್, ಯಾವ ಮಹಿಳೆಯರನ್ನು ಉದ್ಧಾರ ಮಾಡುವೆ ಎನ್ನುವ ರಾಹುಲ್ ಗಾಂಧಿ, ಯಾವ ಪ್ರಕಾಶ್ ರೈ… ಹೂಂ, ಹೂಂ. ಒಬ್ಬರೂ ಬಾಯಿ ಬಿಡುತ್ತಿಲ್ಲ? ಇಂಥವರು ಮಾತ್ರ ಬೇರೆಯವರನ್ನು ಕೋಮುವಾದಿಗಳು ಎಂಬ ಪಟ್ಟ ಕಟ್ಟುತ್ತಾರೆ. ಇದು ಮಾತ್ರ ಕೋಮಲವಾದವೇ?
ಯೂಸುಫ್ ಮುಸ್ಲಿಮೇತರನ ಜತೆಗೆ ತಮ್ಮ ಮಗಳ ಜತೆ ಮದುವೆ ನಿಶ್ಚಯಿಸಿದ ಬೆನ್ನಲ್ಲೇ ಅ.19ರಂದು ಸಮಿತಿ ನೋಟಿಸ್ ಜಾರಿ ಮಾಡಿದೆ. ಆದರೂ ಯೂಸುಫ್ ಅ.20ರಂದು ತಮ್ಮ ಮಗಳನ್ನು ಕ್ರಿಶ್ಚಿಯನ್ ವ್ಯಕ್ತಿಗೆ ಧಾರೆಯೆರೆದಿದ್ದಾರೆ. ಅದ್ದೂರಿ ಮದುವೆಗೆ ನೂರಾರು ಜನ ಆಗಮಿಸಿ ಶುಭಾಶಯ ಕೋರಿದ್ದಾರೆ. ಈಗ ಇಸ್ಲಾಂ ಧರ್ಮಗುರುಗುಳು, ಸೋಗಲಾಡಿ ಜಾತ್ಯತೀತವಾದಿಗಳು ಕರೆಂಡು ಹೊಡೆದ ಕಾಗೆಯಂತಾಗಿದ್ದಾರೆ ನಿಜ. ಆದರೆ ಸಾಮಾಜಿಕ ಬಹಿಷ್ಕಾರದಂಥ ಕೃತ್ಯವನ್ನೂ ವಿರೋಧಿಸದವರನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ.
Leave A Reply