ಅಷ್ಟಕ್ಕೂ ಮೆರ್ಸೆಲ್ ಚಿತ್ರದಲ್ಲಿ ಇರುವುದಾದರೂ ಏನು? ನಾವೇಕೆ ಇಂಥ ಚಿತ್ರ ನೋಡಬಾರದು?
2009ರಲ್ಲಿ ಸ್ಲಮ್ ಡಾಗ್ ಮಿಲೇನಿಯರ್ ಸಿನಿಮಾ ಬಂತು. ಅದರಲ್ಲಿ ಹಿಂದೂಗಳನ್ನು ಕ್ರೂರವಾಗಿ ಚಿತ್ರಿಸಲಾಯಿತು. ಕೈತುಂಬ ಹಣದ ಜತೆಗೆ ಆಸ್ಕರ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು…
2014ರಲ್ಲಿ ಆಮೀರ್ ಖಾನ್ ಅಭಿನಯದ ಪಿಕೆ ರಿಲೀಸ್ ಆಯಿತು. ಇದರಲ್ಲೂ ಹಿಂದೂ ಧರ್ಮದ ಹುಳುಕು ಎತ್ತಿಹಿಡಿಯುವ, ವಿಜೃಂಭಿಸುವ ಪ್ರಯತ್ನ ಮಾಡಿ ಬಾಕ್ಸ್ ಆಫೀಸಿನಲ್ಲಿ ಅಪಾರ ಹಣ ಬಾಚಿತು…
2015ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಜೀರಾವ್ ಮಸ್ತಾನಿ ಚಿತ್ರದಲ್ಲಿ ಹಿಂದೂಗಳ ಪರವಾಗಿ ಹೋರಾಡಿದ್ದ ಧೀರ ಬಾಜೀರಾವ್ ನನ್ನು ಸ್ತ್ರೀಲೋಲನನ್ನಾಗಿ ಚಿತ್ರಿಸಿ ಹಣ ಮಾಡಲಾಯಿತು…
ಹೀಗೆ, ಬಾಲಿವುಡ್ ಚಿತ್ರರಂಗದಲ್ಲಿ ಹಿಂದೂಗಳನ್ನು ಬೈದು, ಬರೀ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಡುಗಡೆಗೊಳಿಸಿದ ಚಿತ್ರಗಳೇ ಜಾಸ್ತಿ. ಒಬ್ಬನೇ ಒಬ್ಬ ನಿರ್ದೇಶಕ, ಇಸ್ಲಾಂನ ಮೌಢ್ಯವನ್ನು, ಜಿಹಾದನ್ನು, ಕ್ರೈಸ್ತ ಧರ್ಮದ ಮತಾಂತರವನ್ನು ಎತ್ತಿ ತೋರಿಸಲಿಲ್ಲ. ಅಂಥ ಚಿತ್ರವನ್ನು ಮಾಡೋಣ ಎಂದು ಯಾವ ಖಾನನೂ ಹೇಳಲಿಲ್ಲ. ಅದೇ ಹಿಂದೂ ಧರ್ಮದ ಕುರಿತು ಉಪಟಳ ಮಾಡುವ ಚಿತ್ರವಿರಲಿ, ಖಾನರು ಓಡೋಡಿ ಬರುತ್ತಾರೆ.
ಆದರೆ ದುರದೃಷ್ಟವಶಾತ್, ಈ ಹಿಂದೂಗಳ ವಿರುದ್ಧ ಹಲ್ಲು ಮಸಿಯುವ, ಸುಖಾಸುಮ್ಮನೆ ಕೇಂದ್ರದ ಯೋಜನೆಯನ್ನು ವಿರೋಧಿಸುವ ಚಾಳಿ, ವಿಕೃತ ಮನಸ್ಸು, ಒಣ ಅಜೆಂಡಾವೊಂದು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ಅದೂ ಮೆರ್ಸೆಲ್ ಚಿತ್ರದ ಮೂಲಕ…
ಅಷ್ಟಕ್ಕೂ ಇಷ್ಟೊಂದು ವಿವಾದ ಸೃಷ್ಟಿಸಿರುವ ಮೆರ್ಸೆಲ್ ಚಿತ್ರದಲ್ಲಿರುವ ಡೈಲಾಗ್ ಗಳು ಯಾವವು ಗೊತ್ತಾ?
-
ದೇಶದಲ್ಲಿ ದೇವಾಲಯಗಳಿಗಿಂತ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು.
-
ಸಿಂಗಾಪುರದಲ್ಲಿ ಶೇ.7ರಷ್ಟು ಜಿಎಸ್ ಟಿ ಇದೆ, ಜತೆಗೆ ಆಸ್ಪತ್ರೆಯಲ್ಲಿ ಆರೋಗ್ಯ ಉಚಿತ ಚಿಕಿತ್ಸೆ ಸೌಲಭ್ಯವಿದೆ. ನಮ್ಮಲ್ಲಿ ಮಾತ್ರ 28ರಷ್ಟು ಜಿಎಸ್ ಟಿ ಪಾವತಿಸಬೇಕು…
ಇದೆಲ್ಲ ಏನನ್ನು ತೋರಿಸುತ್ತದೆ? ಯಾವ ಧರ್ಮವನ್ನು ಟೀಕಿಸಲು? ಕೇಂದ್ರ ಸರ್ಕಾರದ ಮಹತ್ತರ ಯೋಜನೆ ವಿರುದ್ಧ ಬೊಗಳೆ ಬಿಡಲು ಇಷ್ಟೆಲ್ಲ ನಾಟಕವಾಡಬೇಕಿತ್ತೆ? ಅಷ್ಟಕ್ಕೂ ಈ ಡೈಲಾಗ್ ಗಳಲ್ಲಿ ಯಾವುದಾದರೂ ಹುರುಳಿದೆ ಎನಿಸುತ್ತದೆಯೇ?
ದೇಶದಲ್ಲಿ ದೇವಾಲಯಗಳಿಗಿಂತ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರಬೇಕು ಎಂಬ ಮಾತಿಗೆ ಬರೋಣ. ಅಲ್ಲ ಸ್ವಾಮಿ, ಆಸ್ಪತ್ರೆಗಳು ಹೆಚ್ಚಿರಬೇಕು ಎಂಬ ನಿಮ್ಮ ಚೆಂದದ ಕಲ್ಪನೆಗೆ ದೇವಾಲಯ ಇರಬಾರದು ಎಂದೇಕೆ ಬೊಬ್ಬೆ ಹಾಕುತ್ತೀರಿ? ನಿರ್ದೇಶಕ ಆಟ್ಲಿ, ನಟ ವಿಜಯ್ ಗೆ ಸಂಕಷ್ಟ ಎದುರಾದರೆ ದೇವರಿಗೆ ಮೊರೆ ಇಡುವುದಿಲ್ಲವೇ? ನೀವು ಚರ್ಚಿಗೆ ಹೋಗುವುದಿಲ್ಲವೇ? ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದಕ್ಕೂ, ದೇವಾಲಯ ಜಾಸ್ತಿ ಇರಬಾರದು ಎಂಬುದಕ್ಕೂ ಏನು ಸಂಬಂಧ?
ಇಷ್ಟೆಲ್ಲ ಹೇಳುವ ನೀವು, ದೇಶದಲ್ಲಿ ಮಸೀದಿ, ಚರ್ಚ್ ಗಳಿಗಿಂತ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರಬೇಕು ಎಂದೇಕೆ ಡೈಲಾಗ್ ಹೊಡೆಯಲಿಲ್ಲ? ಮೆಟ್ಟಿನ ಏಟು ಬೀಳುತ್ತವೆ ಎಂಬ ಭಯವಾ? ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಅಕ್ರಮ ಮದರಸಾಗಳಿವೆ ಎಂದು ವರದಿಯಿಂದ ತಿಳಿದುಬಂದಿದೆ. ಇದರ ಬಗ್ಗೆ ಏಕೆ ಸಿನಿಮಾದಲ್ಲಿ ತೋರಿಸುವುದಿಲ್ಲ. ಏಕೆ, ಜನರಿಗೆ ಸ್ಪಷ್ಟ ಹಾಗೂ ದಿಟ್ಟ ಸಂದೇಶ ತೋರಿಸುವುದಿಲ್ಲ. ಎದೆಯಲ್ಲಿ ಗುಂಡಿಗೆ ಇಲ್ಲವೋ? ಅಥವಾ ನಿಮ್ಮದೂ ಇಬ್ಬಂದಿತನವೋ? ಬಹುಸಂಖ್ಯಾತ ಹಿಂದೂಗಳ ಮೇಲೇಕೆ ಇಷ್ಟೊಂದು ವಿಷ ಕಾರುತ್ತೀರಿ?
ಇನ್ನು ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕುರಿತು ಭಾರಿ ಡೈಲಾಗ್ ಇದೆ. ಆದರೆ ಈ ಡೈಲಾಗ್ ಬರೆಯುವ ಮುನ್ನ ಆಟ್ಲಿಗೆ ಬುದ್ಧಿ ಬೇಡವೇ? ಹೊಡೆಯುವ ವಿಜಯ್ ಗೂ ಬುದ್ಧಿ ಇಲ್ಲವೇ? ಜಿಎಸ್ ಟಿ ಜಾರಿಯಾಗಿದ್ದು ಕಳೆದ ಜುಲೈನಲ್ಲಿ. ಅದು ಯಶಸ್ವಿಯಾಗಲು ಮೂರು ವರ್ಷ ಬೇಕು ಎಂದು ತಜ್ಞರೇ ಹೇಳಿದ್ದಾರೆ. ಹೀಗಿರುವಾಗ ನಮ್ಮ ದೇಶದ ತೆರಿಗೆ ವ್ಯವಸ್ಥೆಯನ್ನೇಕೆ ಟಾರ್ಗೆಟ್ ಮಾಡಬೇಕು? ಕಾಂಗ್ರೆಸ್ ವಕ್ತಾರರಂತೇಕೆ ಡೈಲಾಗ್ ಹೊಡೆಯಬೇಕು.
ಹೌದು, ಸಿಂಗಪುರದಲ್ಲಿ ಶೇ.7ರಷ್ಟು ತೆರಿಗೆ ಇದೆ ನಿಜ. ಆದರೆ ಅಲ್ಲಿ 20 ವರ್ಷಗಳಿಂದ ಜಿಎಸ್ ಟಿ ಜಾರಿಯಿದೆ ಎಂಬುದನ್ನು ಹೇಳಿದ್ದೀರಾ? ಅಲ್ಲಿನ ಜನಸಂಖ್ಯೆ ಎಷ್ಟು, ಭಾರತದ ಜನಸಂಖ್ಯೆ ಎಷ್ಟು? ಅದ್ಹೇಗೆ ವಿದೇಶಿ ತೆರಿಗೆ ಪದ್ಧತಿಯನ್ನು ಭಾರತದ ತೆರಿಗೆಯೊಂದಿಗೆ ಹೋಲಿಸುತ್ತೀರಿ? ಇಷ್ಟೆಲ್ಲ ಡೈಲಾಗ್ ಹೊಡೆಯುವ ವಿಜಯ್ ಕಳೆದ ಐದು ವರ್ಷಗಳಿಂದ ತೆರಿಗೆಯನ್ನೇ ಕಟ್ಟಿಲ್ಲ ಎಂಬಮಾತು ಕೇಳಿಬರುತ್ತಿವೆ? ಅವರು ಇದಕ್ಕೇನು ಎನ್ನುತ್ತಾರೆ? ಅಷ್ಟೇ ಏಕೆ, ಸಿಂಗಪುರದಲ್ಲಿ ಶೇ.80ಕ್ಕೂ ಅಧಿಕ ಜನ ತೆರಿಗೆ ಪಾವತಿಸುತ್ತಾರೆ. ಆದರೆ ನಮ್ಮಲ್ಲಿ? ಈ ಕುರಿತು ಸಿನಿಮಾದಲ್ಲಿ ಜಾಗೃತಿ ಮೂಡಿಸಬಹುದಿತ್ತಲ್ಲವೇ?
ಅಷ್ಟಕ್ಕೂ ದೇಶದ ಜಿಎಸ್ ಟಿಯನ್ನು ವಿಫಲ ಯೋಜನೆ ಎಂದವರಾರು? ಜಿಎಸ್ ಟಿ ಜಾರಿಯಾದ ಬಳಿಕ 5 ಲಕ್ಷ ಹೊಸ ತೆರಿಗೆದಾರರ ನೋಂದಣಿಯಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ಜಮೆಯಾಗಿದೆ. ಇದೊಂದು ತೆರಿಗೆ ಸುಧಾರಿತ ಯೋಜನೆ ಎಂದು ಜಗತ್ತೇ ಭಾರತದ ಯೋಜನೆಯನ್ನು ಕೊಂಡಾಡಿದೆ. ವಿಶ್ವಬ್ಯಾಂಕಿನ ಆರ್ಥಿಕ ತಜ್ಞರೆ ಜಿಎಸ್ ಟಿ ಉತ್ತಮ ಯೋಜನೆ ಎಂದು ತಿಳಿಸಿದ್ದಾರೆ. ಇದನ್ನೂ ಸಿನಿಮಾದಲ್ಲಿ ತೋರಿಸಬಹುದಿತ್ತಲ್ಲವೇ?
ಇನ್ನು ಇಂಥ ಚಿತ್ರಕ್ಕೆ ಕಮಲ್ ಹಾಸನ್ ಸೇರಿ ಹಲವರು ಇಂಥ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಇದನ್ನು ಬೆಂಬಲಿಸುವವರೂ ಕೇಂದ್ರ ಸರ್ಕಾರ ಹಾಗೂ ಹಿಂದೂ ವಿರೋಧಿಗಳೇ ಎಂಬುದು ಅಷ್ಟೇ ದಿಟ. ಹಾಗಾಗಿ, ಹಿಂದೂಗಳಾದ ನಾವು, ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿಕೊಂಡಿರುವ ನಾವು, ಮೆರ್ಸೆಲ್ ನಂಥ ಕೀಳು ಅಭಿರುಚಿಯ ಚಿತ್ರವನ್ನು ಏಕೆ ನೋಡಬೇಕು? ನಮ್ಮನ್ನೇ ಟಾರ್ಗೆಟ್ ಮಾಡಿದ ಅವರ ಜೇಬಿಗೇಕೆ ಹಣ ತುಂಬಿಸಬೇಕು? ಯೋಚಿಸಿ.
Leave A Reply