ಬಿಜೆಪಿ ಸಚಿವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದ ಪತ್ರಕರ್ತನ ಬಂಧನ
ಲಖನೌ: ಛತ್ತೀಸ್ ಗಡದ ಬಿಜೆಪಿ ಸಚಿವರೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಪತ್ರಕರ್ತನೊಬ್ಬನನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಪತ್ರಕರ್ತನನ್ನು ವಿನೋದ್ ವರ್ಮಾ ಎಂದು ತಿಳಿದಿದ್ದು, ಸಚಿವರ ಕುರಿತು ಸಿಡಿ ಇದೆ, ನಿಮ್ಮ ವಿರುದ್ಧ ಇಂಥ ಆರೋಪ ಇದೆ ಎಂದು ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಬ್ಲ್ಯಾಕ್ ಮೇಲ್ ಹಿನ್ನೆಲೆಯಲ್ಲಿ ಸಚಿವರ ಆಪ್ತರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆದಾಗ್ಯೂ ವಿನೋದ್ ವರ್ಮಾರಿಂದ ಹಲವು ಸಿಡಿ, ಪೆನ್ ಡ್ರೈವ್ ಸೇರಿ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಿಗೆ ಪ್ರಕರಣದಲ್ಲಿ ಆರೋಪಿ ವಿರುದ್ಧ ರಾಯಪುರ ಜಿಲ್ಲೆ ಪಿಎಸ್ ಪಂಡ್ರಿಯಲ್ಲಿ ಸೆಕ್ಷನ್ 384 ಹಾಗೂ 506ರ ಅನ್ವಯ ದೂರು ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿನೋದ್ ವರ್ಮಾ ಇತ್ತೀಚೆಗೆ ಬಿಜೆಪಿ ವಿರುದ್ಧ ಮಾತನಾಡುವುದಲ್ಲದೇ, ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದರು ಎಂದು ಛತ್ತೀಸ್ ಗಡ ಸರ್ಕಾರ ತಿಳಿಸಿದೆ.
ವಿನೋದ್ ವರ್ಮಾ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸಂಪಾದಕ, ಅಮರ್ ಉಜಾಲ ಹಾಗೂ ಬಿಬಿಸಿ ಚಾನೆಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Leave A Reply