ಬ್ರಿಟನ್ ಬ್ರಿಟಿಷರ ರಾಷ್ಟ್ರದಂತೆ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ: ಮೋಹನ್ ಭಾಗವತ್
Posted On October 28, 2017
0

ಭೋಪಾಲ್: ಬ್ರಿಟನ್ ಬ್ರಿಟಿಷರ ರಾಷ್ಟ್ರ, ಜರ್ಮನ್ ಜರ್ಮನ್ನರ, ಅಮೆರಿಕ ಅಮೆರಿಕನ್ ದೇಶದಂತೆ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಆರೆಸ್ಸೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಭಾರತ ಹಿಂದೂಗಳ ರಾಷ್ಟ್ರ ಎಂದ ಮಾತ್ರಕ್ಕೆ ಹಿಂದೂಯೇತರರಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಕೊಳ್ಳುವುದು ತಪ್ಪು. ಹಾಗೆಯೇ ನಾವೇನು ಬೇರೆ ಧರ್ಮದವರನ್ನು ಬಹಿಷ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೂ ಎಂಬ ಪದ ಭಾರತ ಮಾತೆಯ ಮಕ್ಕಳು, ಭಾರತೀಯ ಪೂರ್ವಜರು ಹಾಗೂ ಭಾರತೀಯ ಸಂಸ್ಕೃತಿಯಂತೆ ಬದುಕು ಸಾಗಿಸುವ ಎಲ್ಲರನ್ನೂ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ದೇಶದ ಪ್ರಗತಿಯ ಕುರಿತು ಸಹ ಮಾತನಾಡಿರುವ ಭಾಗವತ್, ಭಾರತವನ್ನು ಯಾವುದೇ ಒಬ್ಬ ವ್ಯಕ್ತಿಯಿಂದ ಮಾತ್ರ ಔನ್ನತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಇದರಲ್ಲಿ ದೇಶದ ಜನರ ಸಹಕಾರ ಹಾಗೂ ಪಾಲುದಾರಿಕೆಯೂ ಮುಖ್ಯ ಎಂದಿದ್ದಾರೆ.
Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
September 15, 2025