ನಡುರಸ್ತೆಯಲ್ಲೇ ಆರೆಸ್ಸೆಸ್ ಮುಖಂಡನ ಹತ್ಯೆ, ಈಗೆಲ್ಲಿದ್ದೀರಿ ಪ್ರಕಾಶ್ ರಾಜ್?
ಚಂಡೀಗಡ: ಈ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸರ್ಕಾರಗಳಿರುವ ರಾಜ್ಯದಲ್ಲಿ ಏನಾಗುತ್ತಿದೆ? ಏಕೆ ಆರೆಸ್ಸೆಸ್, ಬಿಜೆಪಿ, ಹಿಂದೂಗಳನ್ನು ಕೊಲೆ ಮಾಡಲಾಗುತ್ತದೆ? ಇವುಗಳ ಬಗ್ಗೆ ಏನಾಗ್ತಿದೆರೀ ಕಾಂಗ್ರೆಸ್, ಕಮ್ಯುನಿಸ್ಟ್ ರಾಜ್ಯಗಳಲ್ಲಿ ಅಂತ ಪ್ರಕಾಶ್ ರೈ ಏಕೆ ಪ್ರಶ್ನೆ ಮಾಡಲ್ಲ?
ಪಂಜಾಬಿನ ಅಮೃತಸರದಲ್ಲಿ ನಡುರಸ್ತೆಯಲ್ಲೇ ಆರೆಸ್ಸೆಸ್ ಮುಖಂಡನ ಹತ್ಯೆ ಮಾಡಿರುವುದು ಈ ಪ್ರಶ್ನೆಗಳೇಳುವಂತೆ ಮಾಡಿದೆ.
ಹೌದು, ಅಮೃತಸರದ ಭಾರತ್ ಬಜಾರ್ ಎಂಬ ಜನದಟ್ಟಣೆಯ ಪ್ರದೇಶದಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡ ವಿಪಿನ್ ಕುಮಾರ್ ರನ್ನು ದುರುಳರು ಗುಂಡಿಕ್ಕಿ ಕೊಂದಿದ್ದಾರೆ. ಈ ಕುರಿತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಲಭೂತವಾದಿಗಳ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ವಿಪಿನ್ ಕುಮಾರ್ ಮತ್ತು ಅವರ ಸಹಚರರೊಂದಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ, ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ನೆಲಕ್ಕುರುಳಿದ ವಿಪಿನ್ ಮೇಲೆ ಗುಂಡು ಹಾರಿಸಿ ಹತ್ಯ ಮಾಡಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಈಗ ಆರೆಸ್ಸೆಸ್ ಮುಖಂಡರು ಪ್ರಕರಣವನ್ನು ಸಿಬಿಐ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಇಂಥ ಪ್ರಕರಣ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸರ್ಕಾರ ಆಡಳಿತವಿರುವ ರಾಜ್ಯಗಳಲ್ಲಿ ಸಾಮಾನ್ಯವಾಗಿದ್ದು, ಯಾವುದೇ ಒಬ್ಬ ಎಡಬಿಡಂಗಿ, ಬುದ್ಧಿಜೀವಿ, ನಟರು ಬಾಯಿಬಿಡೋಲ್ಲ ಎಂಬುದೇ ಅವರ ಇಬ್ಬಂದಿತನಕ್ಕೆ ಸಾಕ್ಷಿ.
Leave A Reply