ಗೋ ರಕ್ಷಣೆಗಾಗಿ ಹೀಗೊಂದು ಸೆಲ್ಫೀ ವಿತ್ ಕೌ ಜಾಗೃತಿ ಅಭಿಯಾನ
ಕೋಲ್ಕತಾ: ಅಹಿಂಸಾತ್ಮಕವಾಗಿ ಗೋರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ನಂತರ ದೇಶದಲ್ಲಿ ಅಹಿಂಸಾತ್ಮಕವಾಗಿ ಗೋರಕ್ಷಣೆಗೆ ಜನ ಮುಂದಾಗಿದ್ದಾರೆ.
ಅದರಲ್ಲೂ ಕೋಲ್ಕತಾದಲ್ಲಿ ಗೋ ಸೇವಾ ಪರಿವಾರ್ ಎಂಬ ಸರ್ಕಾರೇತರ ಸಂಸ್ಥೆ (ಎನ್ ಜಿಒ) ಗೋರಕ್ಷಣೆಗಾಗಿ ಸೆಲ್ಫೀ ವಿತ್ ಕೌ ಎಂಬ ಜನ ಜಾಗೃತಿ ಅಭಿಯಾನ ಆರಂಭಿಸಿದೆ.
ಗೋವುಗಳೊಂದಿಗೆ ಇರುವ ಸೆಲ್ಫೀ ತೆಗೆದು ಎನ್ ಜಿಒ ನೀಡಿದ ವಿಳಾಸಕ್ಕೆ ಡಿ.31ರವರೆಗೆ ಕಳುಹಿಸಬೇಕಿದ್ದು, ಜನವರಿ 21ರಂದು ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಗೋ ರಕ್ಷಣೆ ಎಂಬುದು ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ. ಸಾಮಾಜಿಕ ಸ್ವಾಸ್ಥ್ಯ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಗೋ ರಕ್ಷಣೆ ಮಾಡಬೇಕು ಎಂದು ಎನ್ ಜಿಒ ಅಧಿಕಾರಿ ಅಭಿಷೇಕ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಗೋವಿನ ಪ್ರತಿ ಅಂಗವೂ ಉಪಯೋಗವಾಗುತ್ತದೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹಾಲು, ಮೂತ್ರ ಹಾಗೂ ಸಗಣಿ ಮಾನವನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಎಲ್ಲರೂ ಗೋ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಇರುವ ಕಸಾಯಿ ಖಾನೆ ವಿರುದ್ಧ ಈ ಜಾಗೃತಿ ಅಭಿಯಾನ ಕೈಗೊಂಡಿದ್ದು, ಯುವಕ-ಯುವತಿಯರು ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
Leave A Reply