ಮಂಗಳೂರಿನಿಂದ ಕಾಲ್ಕಿತ್ತ ರಾಘವೇಂದ್ರ ತೀರ್ಥ
ಮಂಗಳೂರು,ಅ-31:ಶ್ರೀ ಕಾಶೀಮಠ ಸಂಸ್ಥಾನದಿಂದ ಉಚ್ಚಾಟಿಸಲ್ಪಟ್ಟ ಪದಚ್ಯುತ ಸನ್ಯಾಸಿ ರಾಘವೇಂದ್ರ ತೀರ್ಥ ಅಲಿಯಾಸ್ ಶಿವಾನಂದ ಪೈಗೆ ಆಂದ್ರ ಪ್ರದೇಶದ ಕಡಪಾ ನ್ಯಾಯಾಲಯವು ಶ್ರೀ ಕಾಶೀಮಠ ಸಂಸ್ಥಾನದ ಪೂಜಾ ಪರಿಕರಗಳನ್ನು ಹಿಂತಿರುಗಿಸಲು ಈ ಹಿಂದೆಯೇ ಆದೇಶ ನೀಡಿದ್ದು ಈ ಪ್ರಕರಣದ ಬಗ್ಗೆ ನ್ಯಾಯಾಲಯವುಆಪಾದಿತ ವ್ಯಕ್ತಿಗೆ ಹಲವು ಬಾರಿ ಸಮನ್ಸ್ ನೀಡಿದ್ದರೂ ನ್ಯಾಯಾಲಯದ ಆದೇಶ ಪರಿಗಣಿಸದೆ ತಲೆಮರೆಸಿಕೊಂಡು ಓಡಾಡುತ್ತಿದ್ದು ಕಡಪಾ ನ್ಯಾಯಾಲಯವು ಸೋಮವಾರ ನ್‍ಬಿಡಬ್ಲೂ (ನಾನ್ ಬೇಲೆಬಲ್ ವಾರಂಟ್)ಜಾರಿಗೊಳಿಸಿದ್ದು,ಖುದ್ದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ.
ಮಂಗಳೂರಿನ ಮಣ್ಣಗುಡ್ಡೆಯ ನವದುರ್ಗಾ ದೇವಸ್ಥಾನದಲ್ಲಿ 5 ದಿನಗಳ ಮೊಕ್ಕಾಂನಲ್ಲಿದ್ದ ರಾಘವೇಂದ್ರ ತೀರ್ಥ ನ್ಯಾಯಾಲಯ ಹೊರಡಿಸಿದ ಆದೇಶದ ಹಿಂದೆಯೇ ರಾತೋರಾತ್ರಿ ಮಂಗಳೂರಿನಿಂದ ಕಾಲ್ಕಿತ್ತು ಓಡಿ ಹೋಗಿದ್ದಾರೆ ಎಂಬ ವದಂತಿಯು ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುತ್ತದೆ.
ಈ ಹಿಂದೆಯೂ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯ ಆದೇಶವನ್ನು ಕಡೆಗಣಿಸಿ ಕೇರಳ ರಾಜ್ಯದಲ್ಲಿ ಈತನನ್ನು “ಪ್ರೊಕ್ಲಮ್‍ಡ್ ಓಫೆಂಡರ್” ಘೋಷಿತ ಅಪರಾದಿ ಎಂದು ಘೋಷಿಸಿದ್ದು ಈಗ ಪುನಃ ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನವಿದೆ ಕಾಶೀಮಠದ ಕೋಟ್ಯಾಂತರ ಬೆಲೆ ಬಾಳುವ ಸ್ವರ್ಣ ಹಾಗೂ ರಜತ ಆಭರಣಗಳು ಶ್ರೀ ಸಂಸ್ಥಾನದಲ್ಲಿ ಪೂಜಿಸಲ್ಪಟ್ಟ ಸಾಲಿಗ್ರಾಮಗಳು ಇತನ ಬಳಿ ಇದ್ದು ನ್ಯಾಯಾಲಯ ಹಿಂತಿರುಗಿಸುವಂತೆ ಆದೇಶಿಸಿದರೂ ಹಿಂತಿರಿಗಿಸಿರುವುದಿಲ್ಲ
ಆಂದ್ರ ಪ್ರದೇಶ,ಕೇರಳ,ಕರ್ನಾಟಕ ರಾಜ್ಯಗಳಲ್ಲಿ ಇತನ ಮೇಲೆ ಅನೇಕ ಮೊಕದ್ದಮೆಗಳು ದಾಖಲಾಗಿದ್ದು ಪ್ರಕರಣಗಳೂ ಇನ್ನೂ ಇತ್ಯರ್ಥಗೊಂಡಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ.
Leave A Reply