ಗದ್ದೆಯಲ್ಲಿ ಬೆಳೆ ತ್ಯಾಜ್ಯ ಸುಟ್ಟ ಆಪ್ ಶಾಸಕ, ರಾಮಚಂದ್ರ ಗುಹಾ ಯಾವ ಗುಹೆಯಲ್ಲಿದ್ದಾರೋ?
ದೆಹಲಿ: ನಮ್ಮ ದೇಶವೇ ಹೀಗೇನಾ ಎಂಬಂತೆ ಕೆಲವು ಇಬ್ಬಂದಿತನಗಳು ಪ್ರದರ್ಶನವಾಗುತ್ತವೆ. ಕರ್ನಾಟಕದಲ್ಲಿ ಯಾರನ್ನೋ ಕೊಲೆ ಮಾಡಿದರೆ ರಾಜ್ಯದ ಮುಖ್ಯಮಂತ್ರಿ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯತ್ತ ಬೆರಳು ಮಾಡುತ್ತಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದರೂ ಅರವಿಂದ ಕೇಜ್ರಿವಾಲ್ ಕಣ್ಣಿಗೆ ಕಾಣುವುದಿಲ್ಲ. ಮೋದಿಯವರನ್ನೇ ಟೀಕಿಸುತ್ತಾರೆ. ರಾಮಚಂದ್ರ ಗುಹಾ ಇಂಥ ಇಬ್ಬಂದಿತನಕ್ಕೆ ಇತ್ತೀಚೆಗೆ ನಾಂದಿ ಹಾಡಿದ್ದು ಎಲ್ಲಿರಿಗೂ ಗೊತ್ತಿದೆ.
ಆದರೆ, ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ, ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಬೆಳೆ ತ್ಯಾಜ್ಯ ಸುಡಬಾರದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದರೂ, ಆಪ್ ಶಾಸಕರೊಬ್ಬರು ತಮ್ಮ ಗದ್ದೆಯಲ್ಲಿ ಬೆಳೆ ತ್ಯಾಜ್ಯ ಸುಡಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ದೆಹಲಿ ಮುಖ್ಯಮಂತ್ರಿ ಹಾಗೂ ಇಬ್ಬಂದಿವಾದಿಗಳಿಗೆ ಮುಖಭಂಗವಾಗಿದೆ.
ಬೆಳೆ ಸುಡುತ್ತಿರುವ ರೈತರ ಬಂಧನ ಹಾಗೂ ಆಪ್ ಸರ್ಕಾರದ ಕ್ರಮವನ್ನೇ ಖಂಡಿಸಿದ ಪಂಜಾಬಿನ ಆಪ್ ಶಾಸಕ ಸುಖಪಾಲ್ ಖೈರಾ ಪ್ರತಿಭಟನೆ ರೂಪದಲ್ಲಿ ತಮ್ಮ ಗದ್ದೆಯಲ್ಲಿ ಬೆಳೆ ತ್ಯಾಜ್ಯ ಸುಟ್ಟಿದ್ದಾರೆ.
ಆದರೆ, ಎಲ್ಲದಕ್ಕೂ ಮೋದಿಯವರನ್ನೇ ಟೀಕಿಸುವ ಕೇಜ್ರಿವಾಲ್ ಮಹಾಶಯರು ಈ ಕುರಿತು ಮಾಹಿತಿ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇನ್ನು ಕನ್ನಡ ಬರದಿದ್ದರೂ ಕರ್ನಾಟಕದಿಂದ ರಾಜೋತ್ಸವ ಪ್ರಶಸ್ತಿ ಪಡೆದ ರಾಮಚಂದ್ರ ಗುಹಾ ಯಾವ ಗುಹೆಯಲ್ಲಿದ್ದಾರೋ?
Leave A Reply