ಸೆಕ್ಸ್ ವಿಡಿಯೋ ನೋಡುವ ಸೈಟ್ ಓಪನ್ ಮಾಡಿದರೆ ಹರ ಹರ ಮಹಾದೇವ ಭಜನೆ ಮೊಳಗಿಸುತ್ತದೆ ಈ ಆ್ಯಪ್
ವಾರಣಾಸಿ: ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ಇಂಟರ್ ನೆಟ್ ಮಯವಾಗಿದ್ದು, ಮಕ್ಕಳಿಗೆ ಅಶ್ಲೀಲ ಚಿತ್ರಗಳು ಅನಾಯಾಸವಾಗಿ ಸಿಗುತ್ತವೆ.
ಆದರೆ ಇದನ್ನು ತಡೆಯಲು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರೊಫೆಸರ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆಪ್ ನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿದರೆ ಸಾಕು, ಮಕ್ಕಳು ಅಶ್ಲೀಲ ಚಿತ್ರ ವೀಕ್ಷಿಸುವ ಸೈಟ್ ಓಪನ್ ಮಾಡಿದರೆ ಹರ ಹರ ಮಹಾದೇವ ಭಜನೆ ಗೀತೆ ಹಾಡುವಂತೆ ಮಾಡುತ್ತದೆ ಈ ಹರ ಹರ ಮಹಾದೇವ ಆ್ಯಪ್.
ಬನಾರಸ್ ಹಿಂದೂ ವಿವಿಯ ಸೈನ್ಸ್ ವಿಭಾಗದ ಪ್ರೊ.ಡಾ.ವಿಜಯನಾಥ್ ಮಿಶ್ರಾ ಹಾಗೂ ಅವರ ತಂಡ ಹರ ಹರ ಮಹಾದೇವ ಆ್ಯಪ್ ಅಭಿವೃದ್ಧಿಪಡಿಸಿದ್ದು, ಮಕ್ಕಳು ಸೇರಿ ಯಾರೇ ನಿಮ್ಮ ಮೊಬೈಲಿನಲಿ ಅಶ್ಲೀಲ ಚಿತ್ರ ನೋಡಲು ಪ್ರಯತ್ನಿಸಿದರೆ ಹರ ಹರ ಮಹಾದೇವ ಭಜನೆ ಶುರುವಾಗುತ್ತದೆ.
ಸುಮಾರು ಆರು ತಿಂಗಳ ಪರಿಶ್ರಮದಿಂದ ಈ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದು ಸುಮಾರು 3800 ಅಶ್ಲೀಲ ಚಿತ್ರಗಳ ಸೈಟ್ ಬ್ಲಾಕ್ ಮಾಡುತ್ತದೆ ಎಂದು ವಿಜಯನಾಥ್ ತಿಳಿಸಿದ್ದಾರೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಯಾವುದೇ ಮುಸ್ಲಿಂ ವ್ಯಕ್ತಿ ಸಹ ವೆಬ್ ಸೈಟ್ ನೋಡಿದರೆ ಅಲ್ಲಾ ಹೋ ಅಕ್ಬರ್ ಎಂಬ ಮಂತ್ರ ಪಠಣವಾಗುವ ಆ್ಯಪ್ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ.
Leave A Reply