ಕಸಾಯಿಖಾನೆ ಕುರಿತು ಮಾಹಿತಿ ನೀಡಿದ್ದಕ್ಕೆ ಮುಸ್ಲಿಮರಿಂದಲೇ ಮುಸ್ಲಿಮನ ಹತ್ಯೆ!
ಲಖನೌ: ಉತ್ತರ ಪ್ರದೇಶದ ರಾಮಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಮುಸ್ಲಿಮರು ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೊಲೆ ಮಾಡಿದ್ದಾರೆ.
ಕೆಲವು ಮುಸ್ಲಿಮರು ಕಸಾಯಿಖಾನೆ ಇಟ್ಟು, ಮದುವೆ ಸೇರಿ ಹಲವು ಕಾರ್ಯಕ್ರಮಗಳಿಗೆ ದನದ ಮಾಂಸ ಸರಬರಾಜು ಮಾಡುವ ಯೋಜನೆ ಮಾಡಿದ್ದರು. ಆದರೆ ನಾನ್ಹೆ ಅಲಿ ಎಂಬಾತ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ.
ಇದರಿಂದ ಕುಪಿತರಾದ ಮುಸ್ಲಿಂ ಯುವಕರು ನಾನ್ಹೆ ಅಲಿ ಮಸೀದಿಯಿಂದ ಪ್ರಾರ್ಥನೆ ಮಾಡಿ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗೆ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ದಾಳಿಯಲ್ಲಿ ನಾನ್ಹೆ ಮಗ ಇಸ್ಲಾಂ ಅಲಿ, ಸಂಬಂಧಿ ಮುಖ್ತಿಯಾರ್ ಅಲಿಗೂ ಗಾಯಗಳಾಗಿವೆ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ, ಗೋ ರಕ್ಷಣೆ ಹೆಸರಲ್ಲಿ ದೇಶದಲ್ಲಿ ಹಿಂದೂಗಳು ಮುಸ್ಲಿಮರ ಹತ್ಯೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಗೋ ಹತ್ಯೆಗಾಗಿ ಮುಸ್ಲಿಮರೇ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಿರುವುದು ಆತಂಕಕ್ಕೀಡು ಮಾಡಿದೆ.
Leave A Reply