ಅಮರನಾಥದಲ್ಲಿ ಗಂಟೆಯಿಂದ ಶಬ್ದಮಾಲಿನ್ಯ ಎಂದ ಹಸಿರು ನ್ಯಾಯಪೀಠಕ್ಕೆ ಮಸೀದಿಗಳ ಮೇಲಿನ ಮೈಕಾಸುರ ಕಾಣಲಿಲ್ಲವೇ
ಕೋಟ್ಯಂತರ ಭಾರತೀಯರ ನಂಬಿಕೆ, ಶ್ರದ್ಧೆ, ಭಕ್ತಿಯ ತಾಣ ಅಮರನಾಥದಲ್ಲಿ ಶಬ್ದಮಾಲಿನ್ಯ ವಲಯ (ಸೈಲೆಂಟ್ ಜೋನ್) ಎಂದು ಹಸಿರು ನ್ಯಾಯ ಪೀಠ ಘೋಷಿಸಿದೆ. ಈ ಘೋಷಣೆ ಪ್ರಕಾರ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು, ಜೋರಾಗಿ ಮಾತನಾಡಬಾರದು, ಟೆಂಗಿನ ಕಾಯಿ ಒಡೆಯಬಾರದು. ಶಬ್ದಮಾಲಿನ್ಯದಿಂದ ಹಿಮಕುಸಿತವಾಗುತ್ತದೆ ಎಂದು ಆದೇಶಿಸಿದೆ.
ಅಮರನಾಥ್ ಸದಾ ಮಂಜುಗಡ್ಡೆಗಳಿಂದ ಕೂಡಿದ ಅಪಾಯದ ತುದಿಗಾಲಲ್ಲಿ ಇರುವ ಹಿಮಾವೃತ ಪ್ರದೇಶ ಅಮರನಾಥ್. ಇಲ್ಲಿ ಚಳಿಗಾಲದಲ್ಲಿ ನಿತ್ಯ ಸಾವಿರಾರು ದೇವರ ದರ್ಶನಕ್ಕೆ ಬರುತ್ತಾರೆ. ಅವರೆಲ್ಲರ ಪ್ರಾಣ ರಕ್ಷಣೆ ಮುಖ್ಯ.ಸ್ವಲ್ಪ ಏರುಪೇರಾದರೂ ಹಿಮಕುಸಿತದಿಂದ ಎಲ್ಲರ ಪ್ರಾಣ ಪಕ್ಷಿ ಹಾರಿಹೋಗುವುದು ನಿಶ್ಚಿತ.
ಆದರೆ ಹಸಿರು ನ್ಯಾಯಪೀಠದ ಈ ಆದೇಶ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕದೆ ಇರದು. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ, ಟೆಂಗು ಒಡೆಯುವುದರಿಂದ, ಜೋರಾಗಿ ಮಾತನಾಡುವುದರಿಂದ ಹಿಮ ಕುಸಿತವಾಗುತ್ತದೆ ಎಂಬ ವಿಷಯವೇ ಪ್ರಶ್ನಾರ್ಹ. ಸದಾ ಹಿಂದೂಗಳ ಹಬ್ಬಗಳು, ಆಚರಣೆಗಳು, ಸಂಸ್ಕೃತಿ, ದೇವಸ್ಥಾನಗಳ ಮೇಲೆಯೇ ಹಸಿರುವಾದಿಗಳ ಕಣ್ಣು ಬಿದ್ದಿರುವುದು ಮಾತ್ರ ದುರಂತ. ಇವರಿಗೆಲ್ಲರಿಗೂ ಬೇರೆ ಧರ್ಮದ ಅಂಧಾಚರಣೆಗಳು ಕಾಣುವುದಿಲ್ಲವೇ?
ಕಾಶ್ಮೀರದ ಅಮರನಾಥ್ ದಲ್ಲಿ ಗಂಟೆ ಬಾರಿಸಿದರೆ ಹಿಮಕುಸಿತವಾಗುತ್ತದೆ ಎನ್ನುವ ಹಸಿರು ನ್ಯಾಯಪೀಠಕ್ಕೆ ಇಡೀ ಜಮ್ಮು ಮತ್ತು ಕಾಶ್ಮೀರದ ಗಲ್ಲಿ ಗಲ್ಲಿಯಲ್ಲಿರುವ ಮಸೀದಿಗಳ ಮೇಲೆ ನಿತ್ಯ ಕಿವಿ ತಮಟೆ ಒಡೆಯುವಂತೆ ಅರಚುವ ಮೈಕಾಸುರನಿಂದ ಹೊರಹೊಮ್ಮುವ ಭಯಂಕರ ಶಬ್ದದಿಂದ ಹಿಮಕುಸಿತವಾಗುವುದಿಲ್ಲವೇ, ಶಬ್ದಮಾಲಿನ್ಯವಾಗುವುದಿಲ್ಲವೇ?
ಬರೀ ದೇವಸ್ಥಾನದಲ್ಲಿರುವ ಗಂಟೆ ಬಾರಿಸುವುದರಿಂದ ಹಿಮಕುಸಿತವಾಗುತ್ತದೆ ಎಂದಾದರೆ ಮಸೀದಿ ಮೇಲೆ ಅರಚುವ ಮೈಕಾಸುರನಿಂದ ಹಿಮಕುಸಿತವಾಗುವ ಭೀತಿ ಹುಟ್ಟಬೇಕಲ್ಲವೇ? ಇತ್ತೀಚೆಗೆ ಸಂಗೀತಗಾರ ಸೋನು ನಿಗಮ ಮಸೀದಿಯಿಂದ ಹೊರಡುವ ಅಜಾನ್ ನಿಂದ ಹೊರಡುವ ಶಬ್ದದಿಂದ ಕಿರಿಕಿರಿಯಾಗುತ್ತದೆ ಎಂದಿದಕ್ಕೆ ಫತ್ವಾ ಹೊರಡಿಸಿದ್ದ ದುರುಳಿರುವ ನಾಡಿನಲ್ಲಿ, ದೇವಸ್ಥಾನ ಗಂಟೆ ಬಾರಿಸಿದರೇ ಅದ್ಯಾವ ಮಟ್ಟಕ್ಕೆ ಭೂಮಿ ನಡುಗುತ್ತೇ ಎಂಬುದನ್ನು ಹಸಿರು ನ್ಯಾಯ ಪೀಠ ಬಹಿರಂಗಪಡಿಸಬೇಕು.
ಹಿಂದೂ ಧರ್ಮ ಬದಲಾವಣೆಗಳಿಗೆ ಸದಾ ಮೈತೆರೆದುಕೊಳ್ಳುತ್ತದೆ. ಇಲ್ಲಿನ ಎಲ್ಲವೂ ಮೌಢ್ಯ ಎಂಬಂತೆ ಈಗ ದೇವಸ್ಥಾನದ ಗಂಟೆ ಮೇಲೆ ಪರಿಸರವಾದಿಗಳು ಕಣ್ಣಿಟ್ಟಿರುವುದು ದೊಡ್ಡ ದುರಂತ. ಗಂಟೆ ನಿಷೇಧಿಸಿದಂತೆ ಮಸೀದಿ ಮೇಲೆ ಅಜಾನ್ ಅರಚುವ ಮೈಕಾಸುರನ ಹಾವಳಿ, ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಗಬೇಕು. ಆಗ ಪರಿಸರವಾದಿಗಳ ವಾದದಲ್ಲಿ ಹುರುಳಿದೆ ಎಂಬುದನ್ನು ಸಾಬೀತು ಮಾಡಿದಂತಾಗುತ್ತದೆ.
Leave A Reply