ಮೋದಿ ವಿರೋಧಿಗಳೇ ಕೇಳಿ, ನರೇಂದ್ರ ಮೋದಿ ಅವರದ್ದು ಜಗತ್ತಿನ ಮೂರನೇ ನಂಬಿಕಸ್ಥ ಸರಕಾರ!
ದೆಹಲಿ: ಇತ್ತೀಚೆಗಷ್ಟೇ ನರೇಂದ್ರ ಮೋದಿ ಅವರು ದೇಶದ ಜನಪ್ರಿಯ ರಾಜಕಾರಣಿ ಎಂಬ ವರದಿ ಮೋದಿ ವಿರೋಧಿಗಳಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿತ್ತು. ಈ ಆ್ಯಸಿಡ್ ಸುರಿದಂಥ ಸುದ್ದಿಯೊಂದು ಹೊರಬಿದ್ದಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಶ್ವದ ಮೂರನೇ ನಂಬಿಕಸ್ಥ ಸರಕಾರ ಎಂದು ತಿಳಿದುಬಂದಿದೆ.
ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಕೇಂದ್ರ ಸರ್ಕಾರ ಜಗತ್ತಿನ ನಂಬಿಕಸ್ಥ ಸರ್ಕಾರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ದೇಶದ ನಾಲ್ಕರಲ್ಲಿ ಮೂವರು ಕೇಂದ್ರ ಸರಕಾರದ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ ಎಂದು ಸಮೀಕ್ಷೆಯಿಂದ ದೃಢವಾಗಿದೆ.
ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹಾಗೂ ನೋಟು ನಿಷೇಧದಂಥ ನಿರ್ಧಾರಗಳಿಂದ ಮೋದಿ ಸರಕಾರ ಜನರ ವಿಶ್ವಾಸ ಗಳಿಸಿದೆ. ದೇಶದ ಶೇ.74ರಷ್ಟು ಜನ ಕೇಂದ್ರ ಸರಕಾರದ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸ್ವಿಡ್ಜರ್ ಲೆಂಡ್ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳು ಜನರ ನಂಬಿಕೆ ಗಳಿಸಿದ ಮೊದಲೆರಡು ಸ್ಥಾನದಲ್ಲಿವೆ. ಚಿಲಿ, ಫಿನ್ ಲೆಂಡ್, ಗ್ರೀಸ್ ದೇಶಗಳು ಕೊನೆಯ ಸ್ಥಾನ ಪಡೆದಿವೆ.
Leave A Reply