ಬಸುರಿಯ ದೈಹಿಕ ಆರೋಗ್ಯ ರಕ್ಷಣೆ
ಗರ್ಭಾವಸ್ಥೆಯು ಪ್ರತಿಯೊಬ್ಬ ಸ್ತ್ರೀಗೆ ಅತಿ ಅಪ್ಯಾಯಮಾನವಾದ ಸಮಯ.ಆರೋಗ್ಯಯುತವಾದ ಮಗುವಿಗೆ ಜನ್ಮ ನೀಡುವಲ್ಲಿ ಬಸುರಿಯ ಆರೋಗ್ಯ ಮಹತ್ತರವಾದ ಪಾತ್ರ ವಹಿಸುತ್ತದೆ.ಆರೋಗ್ಯವಂತ ಸ್ತ್ರೀ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಲ್ಲಳು.ಇದರಿಂದ ಈ ಸಂದರ್ಭದಲ್ಲಿ ಮಹಿಳೆಯರು ತಮಗೆ ಪ್ರಿಯವಾದ ಕೆಲವು ತಿನಿಸುಗಳನ್ನು ತ್ಯಾಗ ಮಾಡಲೇಬೇಕು.ಇಲ್ಲದಿದ್ದರೆ ಮುಂದೆ ಔಷಧಿಗಳನ್ನೇ ಆಹಾರವಾಗಿಸಿಕೊಳ್ಳುವಂಥಹ ಸಂದರ್ಭ ತಾಯಿ ,ಮಗು ಇಬ್ಬರಿಗೂ ಬರಬಹುದು.
ಮೊದಲಾಗಿ ಬಸುರಿಗೆ ಯಾವ ಆಹಾರ ಪದಾರ್ಥಗಳು ಒಳ್ಳೆಯದು ಎಂದು ತಿಳಿಯೋಣ.
ನೀರು ಜೀವಜಲ.ಕಾದಾರಿದ ನೀರು ದಿನಕ್ಕೆ ಕನಿಷ್ಠ ಆರು ಲೋಟವಾದರೂ ಕುಡಿಯಬೇಕು.ಬಸುರಿಗೆ ಮೂತ್ರಶಂಕೆ ಜಾಸ್ತಿಯಿರುವುದರಿಂದ ದೇಹದಲ್ಲಿ ನೀರು ಆರಲು ಬಿಡಬಾರದು.
ಕ್ಯಾಲ್ಸಿಯಂ,ಪ್ರೊಟೀನ್ ಇರುವ ಆಹಾರಗಳು ಹೆಚ್ಚಿರಲಿ.ಮೊಳಕೆ ಬರಿಸಿದ ಹೆಸರುಕಾಳು ,ಹುರುಳಿಕಾಳು ಹೀಗೆ ಕಾಳುಗಳನ್ನು ಸ್ವಲ್ಪ ಉಪ್ಪು ಮೆಣಸಿನ ಹುಡಿ ,ನಿಂಬೆ ರಸ ಸೇರಿಸಿ ತಿಂದರೆ ಬಾಯಿಗೂ ರುಚಿ ,ಆರೋಗ್ಯಕ್ಕೂ ಒಳ್ಳೆಯದು.ಇಲ್ಲವೇ ಬೇಯಿಸಿ ಉಸಲಿ ಕೂಡ ಮಾಡಿಕೊಳ್ಳಬಹುದು.
ಹಾಲು ಕುಡಿಯುವುದು ಬಹಳ ಒಳ್ಳೆಯದು.ಬೆಳಗ್ಗೆ ಒಂದು ಮತ್ತು ಸಂಜೆ ಒಂದು ಲೋಟ ಹಾಲು ಕುಡಿಯುವುದು ಕ್ಯಾಲ್ಸಿಯಂ ನ್ನು ಪೂರೈಸುತ್ತದೆ. ಕೆಲವರು ಇದಕ್ಕೆ ಕೇಸರಿ ದಳಗಳನ್ನು ಹಾಕಿ ಕುಡಿಯುತ್ತಾರೆ,ಇದರಿಂದ ಹುಟ್ಟುವ ಮಗು ಬೆಳ್ಳಗಾಗುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ .ಮಗುವಿನ ಮೈ ಬಣ್ಣ ನಿರ್ಧಾರವಾಗುವುದು ವಂಶವಾಹಿಗಳಿಂದ ಮಾತ್ರ.ಆದ್ರೂ ಕೇಸರಿ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು.ಕುದಿಯುವ ಒಂದು ಲೋಟ ಹಾಲಿಗೆ ಒಂದು ಕೇಸರಿ ದಳ ಮಾತ್ರ ಹಾಕ್ಬೇಕು ,ತಣ್ಣಗಾದ ಮೇಲೆ ಕುಡಿಯಬಹುದು .ಜಾಸ್ತಿ ದಳಗಳನ್ನು ಹಾಕಬೇಡಿ ಯಾಕೆಂದ್ರೆ ಇದು ತುಂಬ ಉಷ್ಣಕಾರಕ ಕೂಡ ಹೌದು.ಗರ್ಭಕೋಶ ಸಂಕುಚಿತವಾಗೋ ಸನ್ನಿವೇಶ ಕೂಡ ಬರಬಹುದು.
ಆದಷ್ಟು ಜಂಕ್ ಆಹಾರಗಳಿಂದ ದೂರವಿರಿ.ತುಂಬಾ ಆಸೆಯಾದಾಗ ಮನೆಯಲ್ಲೇ ಶುಚಿಯಾಗಿ ಪಾನಿಪುರಿ ,ಮಸಾಲಾಪುರಿಗಳನ್ನು ತಯಾರಿಸಿಕೊಂಡು ತಿನ್ನಿ.ಜಾಸ್ತಿ ಖಾರ ದೂರ ಇಡಿ.
ಮೈದಾ ಹಿಟ್ಟಿನಿಂದ ಮಾಡಿದ ಬಿಸ್ಕಸ್ತ್ತುಗಳನ್ನು ತಿನ್ನದಿರಿ .ಚಪಾತಿ ಮಾಡುವಾಗ ಮೈದಾ ಸೇರಿಸಬೇಡಿ .ಆದಷ್ಟು ತುಪ್ಪ ಬಳಸಿ ಒಗ್ಗರಣೆ ಕೊಡಿ.ದೋಸೆ ಮಾಡುವಾಗ ತುಪ್ಪ ಬಳಸಿ.ಇದು ರಿಫೈನ್ಡ್ ಎಣ್ಣೆಗಿಂತ ಒಳ್ಳೆಯದು.
ಐಸ್ಕ್ರೀಮ್ ,ತಂಪುಪಾನೀಯಗಳನ್ನು ಖಂಡಿತಾ ಸೇವಿಸಬೇಡಿ .ಇದರಿಂದ ಮಗು ಮತ್ತು ತಾಯಿ ಇಬ್ಬರಿಗೂ ಶೀತ ,ಕಫ ಆಗೋ ಸಾಧ್ಯತೆ ಇದೆ.ಇವು ಹಾಳಾಗದಂತೆ ಕೆಮಿಕಲ್ ಗಳನ್ನೂ ಸೇರಿಸೋದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಆಗ ತಾನೇ ತೆಗೆದ ಶುಚಿಯಾದ ಹಣ್ಣಿನ ರಸವನ್ನು ಬೆಲ್ಲ ಸೇರಿಸಿ ಕುಡಿಯುವುದು ಉತ್ತಮ.ಕಪ್ಪು ಬೆಲ್ಲ ಸೇರಿಸಿದರೆ ಇನ್ನೂ ಒಳ್ಳೆಯದು.
ಆರೋಗ್ಯಯುತವಾದ ಗರ್ಭವಸ್ಥೆ ನಿಮ್ಮದಾಗಲಿ ,ಆರೋಗ್ಯಯುತವಾದ ಮಗು ನಿಮ್ಮ ಕುಟುಂಬಕ್ಕೆ ಬರಲಿ.
Leave A Reply