ಬರಾಕ್ ಒಬಾಮ ಈಗ ಅಮೆರಿಕ ಅಧ್ಯಕ್ಷರಂತೆ, ವಾಹ್, ರಾಹುಲ್ ಗಾಂಧಿ!
ದೆಹಲಿ: ಪ್ರಾಯಶಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಷ್ಟು ದುರದೃಷ್ಟವಂತರೂ ಹಾಗೂ ಅದೃಷ್ಟವಂತರೂ ಯಾರೂ ಇಲ್ಲವೇನೋ?
ಹೌದು ಹೀಗೆ ಹೇಳಲೂ ಕಾರಣಗಳಿವೆ. ಅವರು ಏನೇ ಮಾಡಲಿ ಅಲ್ಲಿ ಅವರಿಗೆ ವಿಪರೀತ ಪಬ್ಲಿಸಿಟಿ ಸಿಗುತ್ತದೆ. ಅವರು ರಾಷ್ಟ್ರೀಯ ನಾಯಕರು ಎಂಬಂತೆ ಪರಿಗಣಿಸಲಾಗುತ್ತದೆ.
ದುರದೃಷ್ಟ ಎಂದರೆ, ಎಲ್ಲ ಪಬ್ಲಿಸಿಟಿ ಹಾಸ್ಯಾಸ್ಪದವಾಗಿ ಸಿಗುತ್ತದೆ. ಹಾಗಂತ ಇದರಲ್ಲಿ ರಾಹುಲ್ ಗಾಂಧಿ ವಿರುದ್ಧ ಪಿತೂರಿ ಮಾಡಲಾಗುತ್ತದೆ ಅಂತಲ್ಲ. ಹಾಗೆ ಹಾಸ್ಯಾಸ್ಪದವಾಗಲು ರಾಹುಲ್ ಗಾಂಧಿ ಅವರೇ ಎಂಬುದೂ ಅಷ್ಟೇ ದಿಟ.
ಈಗ ಮತ್ತೊಮ್ಮೆ ರಾಹುಲ್ ಗಾಂಧಿ ಹಾಸ್ಯಾಸ್ಪದವಾಗಿದ್ದು, ಇತ್ತೀಚೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗಿದ್ದು, ಅದನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ಮರೆತು ನಾನು ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಿ, ಆತ್ಮೀಯವಾಗಿ ಮಾತನಾಡಿದ್ದೇನೆ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
ಈಗ ಇದು ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದು, ರಾಹುಲ್ ಗಾಂಧಿ ಎಡವಟ್ಟಿನ ಕುರಿತು ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ಮೋದಿ ಹೇಳಿದ್ದಾರೆ ಎಂದು ಆಲೂಗೆಡ್ಡೆ ಹಾಕಿ ಚಿನ್ನದ ಮಷಿನ್ ಕಂಡು ಹಿಡಿಯುವ ಕುರಿತು ಮಾತನಾಡಿದ್ದು ಸಹ ಟ್ರೋಲ್ ಗೆ ಕಾರಣವಾಗಿತ್ತು.
Leave A Reply