ಎಸ್.ಡಿ.ಪಿ.ಐ.ನಿಂದ ಚೆಕ್ ಪಡೆದ ಜಿಗ್ನೇಶ್ ಮೇವಾನಿ, ಏನಿದೆ ಇದರ ಹಿಂದೆ ಕಹಾನಿ?
ಗಾಂಧಿನಗರ: ಕಾಂಗ್ರೆಸ್ಸನ್ನು ಬೆಂಬಲಿಸುತ್ತಲೇ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಸೆಕ್ಸ್ ಸಿ.ಡಿ. ಬಹಿರಂಗವಾಗಿತ್ತು. ಇನ್ನು ದಲಿತ ನಾಯಕ ಜಿಗ್ನೇಶ್ ಮೇವಾನಿ ಸಹ ಗುಜರಾತಿನಲ್ಲಿ ಕಾಂಗ್ರೆಸ್ ಬೆಂಬಲದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬೆನ್ನಲ್ಲೇ, ಎಸ್.ಡಿ.ಪಿ.ಐ. ಪಕ್ಷದಿಂದ ಚೆಕ್ ಪಡೆದ ಕುರಿತ ಚಿತ್ರ ಟೈಮ್ಸ್ ನೌ ಸುದ್ದಿವಾಹಿನಿಗೆ ದೊರೆತಿರುವುದು ಕಾಂಗ್ರೆಸ್ ಹಾಗೂ ಮೇವಾನಿಗೆ ತೀವ್ರ ಹಿನ್ನಡೆಯಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಂಕಿತ ಉಗ್ರ ಸಂಘಟನೆಯ ರಾಜಕೀಯ ವಿಭಾಗವಾಗಿರುವ ಎಸ್ ಡಿಪಿಐಯಿಂದ ಚೆಕ್ ಪಡೆದಿರುವ ಚಿತ್ರ ಟೈಮ್ಸ್ ನೌಗೆ ಲಭ್ಯವಾಗಿದ್ದು, ಮೇವಾನಿ ರಾಜಕೀಯ ಕಾರಣಗಳಿಂದಾಗಿ ಚೆಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಕ್ಷಿಣ ಭಾರತದಲ್ಲಿ ಹಲವು ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಪಿಎಫ್ಐ ಸಂಘಟನೆಗೂ ಜಿಗ್ನೇಶ್ ಮೇವಾನಿಗೂ ಏನು ಸಂಬಂಧ? ಮೇವಾನಿಯೇಕೆ ಅವರಿಂದ ಚೆಕ್ ಪಡೆಯಬೇಕು? ಚೆಕ್ ನಲ್ಲಿ ಎಷ್ಟು ಹಣ ನಮೂದಾಗಿತ್ತು? ಇದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗಳು ಕಾಡುತ್ತಿವೆ.
ಪಿಎಫ್ಐ ಸಂಘಟನೆಗೆ ಪಾಕಿಸ್ತಾನದಂತಹ ಇಸ್ಲಾಮಿಕ್ ರಾಷ್ಟ್ರಗಳಿಂದ ಹಣ ಬರುತ್ತಿದೆ ಎಂಬ ಆರೋಪ ಸಹ ಕೇಳಿಬಂದಿವೆ. ಆದಾಗ್ಯೂ, ಜಿಗ್ನೇಶ್ ಮೇವಾನಿ ಚೆಕ್ ವಿಚಾರ ಕಾಂಗ್ರೆಸ್ಸಿಗೂ ಹಿನ್ನಡೆಯಾದಂತಿದೆ.
ಉತ್ತರ ಗುಜರಾತಿನ ವಾದ್ಗಮ್ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಜಿಗ್ನೇಶ್ ಮೇವಾನಿ ಕಣಕ್ಕಿಳಿದಿದ್ದು, ಇವರನ್ನು ಕಾಂಗ್ರೆಸ್ ಬೆಂಬಲಿಸಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ.
Leave A Reply