ಭಾರತದ ಕುಂಭಮೇಳಕ್ಕೆ ಯುನೆಸ್ಕೋ ಮಾನ್ಯತೆ, ಅಮೂರ್ತ ಸಾಂಸ್ಕೃತಿಕ ಸಂಪತ್ತು ಎಂದು ಘೋಷಣೆ!
Posted On December 9, 2017
ನ್ಯೂಯಾರ್ಕ್: ಭಾರತದ ಕುಂಭಮೇಳಕ್ಕೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪಾರಂಪರಿಕ ಮಾನ್ಯತೆ ನೀಡಿದ್ದು, ಕುಂಭಮೇಳ ಅಮೂರ್ತ (ಮುಟ್ಟಲಾಗದ, ಕಾಣದ) ಸಾಂಸ್ಕೃತಿಕ ಆಸ್ತಿ ಎಂದು ಘೋಷಣೆ ಮಾಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಯುನೆಸ್ಕೋ ಅಂತರ್ ಸರ್ಕಾರಿ ಸಮಿತಿ ನಡೆಸಿದ ಅಮೂರ್ತ ಸಾಂಸ್ಕೃತಿಕ ಸಂಪತ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ವಿಶ್ವದ 33 ಅಮೂರ್ತ ಪಾರಂಪರಿಕ ತಾಣಗಳಲ್ಲಿ ಭಾರತದ ಕುಂಭಮೇಳಕ್ಕೂ ಸ್ಥಾನ ನೀಡಲಾಗಿದೆ.
ಕುಂಭಮೇಳ ಹಿಂದೂ ಸಂಪ್ರದಾಯವಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಅಲಹಾಬಾದ್, ಉಜ್ಜಯಿನಿ, ನಾಸಿಕ್ ಹಾಗೂ ಹರಿದ್ವಾರದಲ್ಲಿ ಮಹಾಕುಂಭಮೇಳ ಆಚರಿಸಲಾಗುತ್ತದೆ. ಲಕ್ಷಾಂತರ ಹಿಂದೂಗಳು ಸೇರಿ ಆಚರಣೆ ಮಾಡುತ್ತಾರೆ.
ಒಟ್ಟಿನಲ್ಲಿ ಭಾರತದ ಸಾಂಸ್ಕೃತಿಕ ಆಚರಣೆಯೊಂದು ಜಾಗತಿಕವಾಗಿ ಅಮೂರ್ತ ಸಾಂಸ್ಕೃತಿಕ ಸಂಪತ್ತು ಎಂದು ಘೋಷಣೆಯಾಗಿರುವುದು ಪ್ರತಿ ಹಿಂದೂ ಹೆಮ್ಮೆ ಪಡುವ ವಿಚಾರವಾಗಿದೆ.
- Advertisement -
Leave A Reply