ನಿಮ್ಮಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ, ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಟಾಂಗ್
ದೆಹಲಿ: ಇಷ್ಟು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೇತೃತ್ವದ ಸರ್ಕಾರ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ಟೀಕೆಗಳಿಗೆಲ್ಲ ತೀಕ್ಷ್ಣವಾಗಿ ಟಾಂಗ್ ನೀಡುತ್ತಿದ್ದ, ಅವರೇ ತೋಡಿದ ಖೆಡ್ಡಾಕ್ಕೆ, ಅವರನ್ನೇ ಬೀಳಿಸುತ್ತಿದ್ದ ಅವರು ಈಗ ಪಾಕಿಸ್ತಾನಕ್ಕೂ ಟಾಂಗ್ ನೀಡಿದ್ದಾರೆ.
ಪಾಕಿಸ್ತಾನದ ಹೆಸರು ಬಳಸದೆ ಮೋದಿ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ ಎಂದು ಪಾಕಿಸ್ತಾನ ನೀಡಿದ ಉದ್ಧಟತನದ ಹೇಳಿಗೆಗೆ ಪ್ರತ್ಯುತ್ತರ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ “ಪಾಕಿಸ್ತಾನದಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಸುಖಾಸುಮ್ಮನೆ ದೇಶದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿದೆ. ಅದು ನೀಡಿದ ಹೇಳಿಕೆ ಅಸಂಬದ್ಧವಾಗಿದೆ. ಗಡಿಯಲ್ಲಿ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವ ಪಾಕಿಸ್ತಾನದಂಥ ಉಗ್ರರ ಪೋಷಣೆಯ ರಾಷ್ಟ್ರದಿಂದ ನಾವು ಪಾಠ ಕಲಿಯಬೇಕಿಲ್ಲ. ನಮಗೆ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಮೋದಿ ಅವರು ಗುಜರಾತ್ ಚುನಾವಣೆಯಲ್ಲಿ ಸುಮ್ಮನೆ ಪಾಕಿಸ್ತಾನದ ಹೆಸರು ಅಡ್ಡ ತರುತ್ತಿದ್ದಾರೆ. ಅವರು ಪಾಕ್ ಹೆಸರು ಎತ್ತದೆ ಚುನಾವಣೆ ಗೆಲ್ಲಲಿ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದರು. ಅದಕ್ಕೆ ರವಿಶಂಕರ್ ಪ್ರಸಾದ್ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
Leave A Reply