ಸೈನಿಕರಿಗೆ ಸೆಲ್ಯೂಟ್ ಹೊಡೆಯಲೇಬೇಕು
ದೆಹಲಿ: ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಕೇಂದ್ರದ ಸಿಬ್ಬಂದಿ ಇನ್ನು ಮುಂದೆ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಸೆಲ್ಯೂಟ್ ಹೊಡೆಯಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸೈನಿಕರೊಂದಿಗೆ ದುರ್ವರ್ತನೆ ತೋರುತ್ತಿರುವ ಘಟನೆಗಳು ಹೆಚ್ಚಾದರಿಂದ ಮತ್ತು ಟೋಲ್ ಕಟ್ಟದೆ ವಾಹನ ಸಂಚಾರ ಮಾಡುತ್ತಾರೆ ಎಂದು ವ್ಯಂಗವಾಡುತ್ತಿರುವ ವರದಿಗಳು ಬಂದಿದ್ದವು. ಸೈನಿಕರಿಗೆ ಮುಜುಗರವಾಗುವುದನ್ನು ತಡೆಯಲು ಮತ್ತು ಸೈನಿಕರ ವಿರುದ್ಧ ಟೋಲ್ ಸಿಬ್ಬಂದಿಯ ದುವರ್ತನೆಗೆ ಕಡಿವಾಣ ಹಾಕಲು ಈ ಆದೇಶ ಹೊರಡಿಸಲಾಗಿದೆ.
ಸೇವೆಯಲ್ಲಿರುವ ವಾಯುದಳ, ಸೇನಾ ದಳ, ನೌಕಾದಳದ ಸೈನಿಕರಿಗೆ ಮತ್ತು ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ಸೇವೆಯಲ್ಲಿರುವ ಸೈನಿಕರಿಗೆ ಟೋಲ್ ಸಂಗ್ರಹ ಕೇಂದ್ರದ ಸಿಬ್ಬಂದಿ ಸೆಲ್ಯೂಟ್ ಹೊಡೆಯಬೇಕು ಎಂದು ಆದೇಶಿಸಲಾಗಿದೆ.
ಭಾರತೀಯ ಟೋಲ್ ಸಂಗ್ರಹ ಕಾಯಿದೆ 1901 ಪ್ರಕಾರ ಸೈನ್ಯದ ಮೂರು ದಳಗಳ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗಿದೆ. ಇದೀಗ ಸೈನಿಕರಿಗೆ ಮುಜುಗರವಾಗುತ್ತದೆ ಮತ್ತು ಅವಮಾನ ಮಾಡಲಾಗುತ್ತಿದೆ ಎಂದು ಈ ನಿಯಮ ಜಾರಿಗೆ ತರಲಾಗಿದೆ. ಇದು ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ನೀಡುವ ಗೌರವ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
Leave A Reply