ಪ್ರಚಾರಕ್ಕಾಗಿ ಸರ್ಕಾರಿ ಆ್ಯಂಬುಲೆನ್ಸ್ ಬಳಸಿದ ಸಿಪಿಐ(ಎಂ)
ಕಣ್ಣೂರು: ಸಿಪಿಐ(ಎಂ) ನೇತೃತ್ವದ ಕೇರಳದ ಸರ್ಕಾರವನ್ನು ಸಿಪಿಐ(ಎಂ) ಪಕ್ಷ ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಬಡ, ಅನಾರೋಗ್ಯ ಪೀಡಿತರಿಗೆ ತುರ್ತು ಚಿಕಿತ್ಸೆ ಒದಗಿಸಲುವ ಇರುವ ಆ್ಯಂಬುಲೆನ್ಸ್ ನ್ನ ಕಮ್ಯುನಿಸ್ಟ್ ಪಕ್ಷದ ಬೈಕ್ ರ್ಯಾಲಿಗಾಗಿ ಬ್ಯಾನರ್, ಜನರೇಟರ್ ಮತ್ತು ಧ್ವಜಗಳನ್ನು ಸಾಗಿಸಲು ದುರುಪಯೋಗ ಪಡಿಸಿಕೊಂಡು, ಧರ್ಪ ಮೆರೆದಿದ್ದಾರೆ.
ಆ್ಯಂಬುಲೆನ್ಸ್ ನಲ್ಲಿ ರೋಗಿ ಬದಲು ಸಿಪಿಐಎಂ ಪಕ್ಷದ ಬ್ಯಾನರ್, ಜನರೇಟರ್ ಮತ್ತು ಧ್ವಜಗಲನ್ನು ಸಾಗಿಸುವ ದೃಶ್ಯ ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿದ್ದು, ಕಮ್ಯುನಿಸ್ಟರ್ ಈ ದುರಾಡಳಿತಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವೈದ್ಯಕೀಯ ತುರ್ತು ಸೇವೆಗೆ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಆ್ಯಂಬುಲೆನ್ಸ್ ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟರು ಆ್ಯಂಬುಲೆನ್ಸ್ ನ್ನೆ ತಮ್ಮ ಪಕ್ಷದ ವಾಹನದಂತೆ ಬಳಸಿಕೊಂಡಿದ್ದಾರೆ.
ಸಿಪಿಐ(ಎಂ) ನೇತೃತ್ವದ ಸರ್ಕಾರ ರಾಜಕೀಯಕ್ಕೆ ಸರ್ಕಾರಿ ಆಡಳಿತ ಯಂತ್ರವನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕೇರಳ ಬಿಜೆಪಿ ಘಟಕದ ಮುಖಂಡ ಮುರಳೀಧರನ್ ಸೇರಿ ಸಾರ್ವಜನಿಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Leave A Reply