ಮುಂದಿನ ವರ್ಷವೂ ಜಿಡಿಪಿ ನೆಗೆತ, ಮೋದಿ ವಿರೋಧಿಗಳಿಗೆ ಇರಿತ
ದೆಹಲಿ: ನೋಟು ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದಲೇ ದೇಶದ ವಿತ್ತೀಯ ಸ್ಥಿತಿ ಪಾತಾಳ ಕಂಡಿದೆ. ದೇಶದ ವಿತ್ತ ವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ದೇಶದ ಜಿಪಿಡಿ ದರದ ಕುಸಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದವರಿಗೆ ಕಹಿ ಸುದ್ದಿಯೊಂದು ಕಾದಿದೆ.
ಇತ್ತೀಚೆಗಷ್ಟೇ ದೇಶದ ಜಿಡಿಪಿ ದರ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಜಪಾನಿನ ಸಂಸ್ಥೆಯೊಂದು ಭಾರತದ ಆರ್ಥಿಕ ಸ್ಥಿತಿ ಬಗ್ಗೆ ಅವಲೋಕನ ನಡೆಸಿದ್ದು, 2018ರಲ್ಲೂ ಭಾರತದ ಜಿಡಿಪಿ ಔನ್ನತ್ಯಕ್ಕೇರಲಿದೆ. ಜಿಡಿಪಿ ದರ ಶೇ.7.5ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ.
ಜಪಾನಿನ ವಿತ್ತೀಯ ಸೇವೆಗಳ ಪ್ರಧಾನ ಸಂಸ್ಥೆ ನೊಮುರಾದ ಕಾಂಪೋಸಿಟ್ ಲೀಡಿಂಗ್ ಸೂಚ್ಯಂಕದಲ್ಲಿ ಈ ಅಂಶ ಬಹಿರಂಗವಾಗಿದೆ. ಭಾರತದಲ್ಲಿನ ಉತ್ಪಾದನೆ ಹಾಗೂ ಜಾಗತಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ವಿತ್ತೀಯ ವರ್ಷದ ತ್ರೈಮಾಸಿಕ ವರದಿಯಲ್ಲಿ ಭಾರತದ ಜಿಡಿಪಿ ಶೇ.6.3ರಿಂದ ಶೇ.6.7ಕ್ಕೆ ತಲುಪಿ, ದೇಶದ ಆರ್ಥಿಕ ಕ್ಷೇತ್ರದ ಬೆಳವಣಿಗೆ ಮುನ್ಸೂಚನೆ ನೀಡಿತ್ತು.
ಆದರೆ ಇದಕ್ಕೂ ಮೊದಲು ಜಿಡಿಪಿ ದರದಲ್ಲಿ ತುಸು ಕುಸಿತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು, ಎಡಬಿಡಂಗಿಗಳು ಮೋದಿ ಅವರ ನಿರ್ಧಾರಗಳಿಂದಲೇ ದೇಶದ ಜಿಡಿಪಿ ಕುಸಿಯುತ್ತಿದೆ ಎಂದು ಟೀಕಿಸಿದ್ದರು. ಆದರೆ ಭಾರತದ ಆರ್ಥಿಕ ಬೆಳವಣಿಗೆ ವೇಗವಾಗಿ ಆಗುತ್ತಿದ್ದು, ಇವರೆಲ್ಲರ ಬಾಯಿಗೆ ಬೀಗ ಜಡಿದಂತಾಗಿದೆ.
Leave A Reply