ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದ್ವಿತೀಯ ಪುಣ್ಯತಿಥಿ ಆರಾಧನಾ ಮಹೋತ್ಸವ
Posted On December 26, 2017
0

ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದ್ವಿತೀಯ ಪುಣ್ಯತಿಥಿ ಆರಾಧನಾ ಮಹೋತ್ಸವವು ಹರಿದ್ವಾರದ ಶ್ರೀವ್ಯಾಸ ಮಂದಿರದ ಆವರಣದಲ್ಲಿರುವ ವೃಂದಾವನದಲ್ಲಿ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ನೆರವೇರಿತು.
ದೇಶ ವಿದೇಶಗಳಿಂದ ಆಗಮಿಸಿದ ನೂರಾರು ಭಗವತ್ ಭಕ್ತರ ಉಪಸ್ಥಿತಿಯಲ್ಲಿ ಪ್ರಾತ:ಕಾಲ ಶ್ರೀಸಂಸ್ಥಾನದ ಆರಾಧ್ಯದೇವರಾದ ವ್ಯಾಸರಘುಪತಿ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ಪಂಚಾಮೃತ,ಗಂಗಾಭಿಷೇಕ,ಪವಮಾನ ಅಭಿಷೇಕಗಳು ನೆರವೇರಿದವು.ಬಳಿಕ ವೃಂದಾವನದಲ್ಲಿ ಪವಮಾನ ಅಭಿಷೇಕ ನಡೆಯಿತು.ಸಾಯಂಕಾಲ ಶ್ರೀಗುರುಗಳವರ ಗುರುಗುಣಗಾನ ನೆರವೇರಿತು.ಕೊಚ್ಚಿನ್,ಮುಂಬಯಿ,ಮಂಗಳೂರು,ಕಾಂಞಗಾಡ್,ಬೆಂಗಳೂರು ಹಾಗೂ ವಿವಿಧ ಮಠ ಮಂದಿರಗಳ ಶಾಖಾ ಮಠದ ಮೊಕ್ತೇಸರರಿಗೆ,ಪದಾಧಿಕಾರಿಗಳಿಗೆ ಪ್ರಸಾದ ನೀಡಲಾಯಿತು.
ಚಿತ್ರ:ಮಂಜು ನೀರೇಶ್ವಾಲ್ಯ
Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
August 30, 2025