ಬಿಜೆಪಿ, ಆರೆಸ್ಸೆಸ್ಸನ್ನು ಬೆಂಬಲಿಸುವ ಮುಸ್ಲಿಮರು ಮುಸ್ಲಿಮರೇ ಅಲ್ಲವಂತೆ!
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮರು ಬಿಜೆಪಿಯ ಅಭಿವೃದ್ಧಿಪರ ಆಡಳಿತ ನೋಡಿರುವ ಮುಸ್ಲಿಮರು ಬಿಜೆಪಿ ಹಾಗೂ ಆರೆಸ್ಸೆಸ್ಸನ್ನು ಬೆಂಬಲಿಸುತ್ತಿದ್ದಾರೆ. ಜಮ್ಮು-ಕಾಶ್ಮೀರ ಇತಿಹಾಸದಲ್ಲೇ ಬಿಜೆಪಿ ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದು ಸಮ್ಮಿಶ್ರ ಸರ್ಕಾರ ರಚಿಸುವ ಸಾಮರ್ಥ್ಯ ಬೆಳೆಸಿಕೊಂಡಿರುವ ಹಿಂದೆ ಮುಸ್ಲಿಮರ ಬೆಂಬಲವೂ ಇದೆ ಎಂಬುದು ನಿಚ್ಚಳ.
ಆದರೆ ಇದೇ ಕೆಲವು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ದಿಸೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮೊಹಮ್ಮದ್ ಅಕ್ಬರ್ ಲೋಣೆ ಮಾತನಾಡಿದ್ದು, ಬಿಜೆಪಿ ಹಾಗೂ ಆರೆಸ್ಸಸ್ಸನ್ನು ಬೆಂಬಲಿಸುವ ಮುಸ್ಲಿಮರು ನಿಜವಾದ ಮುಸ್ಲಿಮರಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆ ಮೂಲಕ ಮುಸ್ಲಿಮರು ಬಿಜೆಪಿ ಹಾಗೂ ಆರೆಸ್ಸೆಸ್ಸನ್ನು ಬೆಂಬಲಿಸಿರುವುದು ಪರೋಕ್ಷವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಈಗ ಇದೇ ಕಾರಣಕ್ಕೆ ಧರ್ಮದ ಅಂಶವನ್ನು ರಾಜಕೀಯಕ್ಕೆ ಬೆರೆಸಿ ಜಮ್ಮು-ಕಾಶ್ಮೀರ ಮುಸ್ಲಿಮರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ.
ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದ ಲೋಣಿ, ಬಿಜೆಪಿ ಹಾಗೂ ಆರೆಸ್ಸೆಸ್ ಕಾಶ್ಮೀರದಲ್ಲಿ ಅಭಿವೃದ್ಧಿ ಹೆಸರಲ್ಲಿ ಕೇಸರೀಕರಣ ಪ್ರಚಾರ ಮಾಡುತ್ತಿವೆ. ಹಾಗಾಗಿ ಬಿಜೆಪಿ ಹಾಗೂ ಆರೆಸ್ಸೆಸ್ಸನ್ನು ಬೆಂಬಲಿಸುವ ಮುಸ್ಲಿಮರನ್ನು ಕಾಶ್ಮೀರದಿಂದಲೇ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಅಲ್ಲದೆ ಬಿಜೆಪಿ ಹಾಗೂ ಪಿಡಿಸಿ ಸರ್ಕಾರ ರಚನೆಯಾದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದೂ ಹೇಳಿದ್ದಾರೆ. ಆದರೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಆಡಳಿತ ಇದ್ದಾಗಲೇ ಕಾಶ್ಮೀರದಲ್ಲಿ ಹೆಚ್ಚು ಉಗ್ರರ ದಾಳಿಯಾಗಿವೆ. ಬಿಜೆಪಿ-ಪಿಡಿಸಿ ಸಮ್ಮಿಶ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ಜಮ್ಮು-ಕಾಶ್ಮೀರದಲ್ಲಿ 200ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿರುವುದು ದಾಖಲೆಯೇ ಆಗಿದೆ. ಹೀಗಿದ್ದರೂ, ನ್ಯಾಷನಲ್ ಕಾನ್ಫರೆನ್ಸ್ ಕಾನೂನು ಸುವ್ಯವಸ್ಥೆ ಹಾಗೂ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೇ ಸ್ವಧರ್ಮೀಯರನ್ನು ಮುಸ್ಲಿಮರಲ್ಲ ಎಂದು ಕರೆದಿದ್ದಾರೆ.
Leave A Reply