ಜನ್ಮದಿನದಂದೇ ಪಾಪಿ ಪಾಕಿಸ್ತಾನಿಗಳ ಗುಂಡಿಗೆ ಬಲಿಯಾದ ಯೋಧನ ವೀರಗಾಥೆ ಕೇಳಲೇಬೇಕು
ಶ್ರೀನಗರ: ಅಂದು ಆ ಯೋಧನಿಗೆ ಜನ್ಮದಿನದ ಸಂಭ್ರಮ, ತನ್ನ 51ನೇ ಇಳಿವಯಸ್ಸಿನಲ್ಲಿ ನವಯುವಕನಂತೆ ವಿರೋಧಿಗಳ ಎದೆಗೆ ಗುಂಡಿಕ್ಕುವ ತಾಕತ್ತು ಆ ಯೋಧನಿಗೆ ಇತ್ತು. ಆತನಿಗೆ ಜನ್ಮದಿನದ ಸಂಭ್ರಮ ಬಹುಕಾಲ ಉಳಿಯಲಿಲ್ಲ. ದೇಶ ಹೊಸ ವರ್ಷದ ಸಂಭ್ರಮದಿಂದ ಆಚೆ ಬರುತ್ತಿದ್ದರೇ, ಕಾಶ್ಮೀರದ ಕಣಿವೆಯಲ್ಲಿ ಆ ಯೋಧ ಜನ್ಮದಿವನ್ನು ಲೆಕ್ಕಿಸದೇ ಪಾಕಿಸ್ತಾನಿಗಳೊದಿಗೆ ಕದನಕ್ಕಿಳಿದಿದ್ದ. ಆದರೆ ವಿಧಿ ಪಾಪಿ ಪಾಕಿಸ್ತಾನಿಗಳ ಗುಂಡು ಆ ಯೋಧನ ಎದೆ ಸೇರಿತ್ತು. ಆಸ್ಪತ್ರೆಯ ವೈದ್ಯರು ಘೋಷಿಸಿದ್ದರೂ ಯೋಧ ಇನ್ನಿಲ್ಲ ಎಂದರು
ರಾಧಾಪದ್ ಹಜ್ರಾ
ಗಡಿ ಭದ್ರತಾ ಪಡೆಯ ಹಿರಿಯ ಪೇದ. ಜನವರಿ 3ರಂದು ಗಡಿ ಭದ್ರತಾ ಪಡೆಗೆ ವಿಶೇಷ ದಿನವಾಗಿತ್ತ 51 ನೇ ವಯಸ್ಸಿನ ಯೋಧ ಜನವರಿ 3ರಂದು ತನ್ನ ಜನ್ಮದಿನದ ಸಂಭ್ರಮ ಲೆಕ್ಕಿಸದೇ ಕನದಕ್ಕಿಳಿದಿದ್ದರು ರಾಧಾಪದ್ ಹಜ್ರಾ. ಜಮ್ಮು ಕಾಶ್ಮೀರದ ಸಾಂಬಾ ವಲಯದ ದುಲ್ಮಾ ಚಾಕ್ ನಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಆದರೆ ಹಜ್ರಾ ಅವರಿಗೆ ತಮ್ಮ ಜನ್ಮದಿನವೇ ವೀರ ಮರಣವಪ್ಪುವ ಸಂಭವ ಬರುತ್ತದೆ ಎಂಬುದು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ಪೇದೆಯಾಗಿದ್ದ ಹಜ್ರಾ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನಿಯ ಸೈನಿಕರು ದುಲ್ಮಾ ಚಾಕ್ ನ ಗಡಿ ಭದ್ರತಾ ಪಡೆಯ 173 ಬಟಾಲಿಯನ್ ಮೇಲೆ ಅಪ್ರಚೋಧಿತ ದಾಳಿ ನಡೆಸಿಯೇ ಬಿಟ್ಟರು. 51ನೇ ವಯಸ್ಸಿನ ಹಜ್ರಾ ತಾವೇನು ಕಮ್ಮಿಯೇ ಎಂದು ಮುನ್ನುಗಿ ಶತ್ರುವಿನ ಎದೆಬಗೆಯಲು ಗುಂಡಿನ ಸುರುಮಳೆ ಸುರಿಸಲು ಆರಂಭಿಸಿದ್ದರು. ಆದರೆ ಶತ್ರುವಿನ ಗುಂಡು ಹಜ್ರಾ ಅವರ ಎದೆಗೆ ಬಲವಾಗಿ ತಾಕಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಕೈ ಚೆಲ್ಲಿ ಕುಳಿತ್ತಿದ್ದರು. ಯೋಧ ಹಜ್ರಾ ಇನ್ನಿಲ್ಲ ಎಂಬ ಕಹಿ ಸುದ್ದಿಯನ್ನು ಘೋಷಿಸಿದರು.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನವರಾದ ಹಜ್ರಾ 27 ವರ್ಷದಿಂದ ಗಡಿ ಭದ್ರತಾ ಪಡೆಯಲಿ ಕಾರ್ಯ ನಿರ್ವಹಿಸುತ್ತಿದ್ದು, ಪುತ್ರಿ, ಪುತ್ರ ಮತ್ತು ಅಪಾರ ದೇಶಭಕ್ತರನ್ನು ಅಗಲಿದ್ದಾರೆ. ಕಳೆದ ಹಲವು ತಿಂಗಳಿಂದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋಧಿತ ದಾಳಿ ನಡೆಸುತ್ತಿದೆ. ಡಿಸೆಂಬರ್ 23ರಂದು ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದ್ದರಿಂದ ಭಾರತದ ನಾಲ್ಕು ಯೋಧರು ಹುತಾತ್ಮರಾಗಿದ್ದರು.
Leave A Reply