2017ರಲ್ಲಿ ಭಾರತ ಸೈನಿಕರ ಗುಂಡಿಗೆ ಬಲಿಯಾದ ಪಾಕಿ ಸೈನಿಕರೆಷ್ಟು ಗೊತ್ತೆ..?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕ ವಿರುದ್ಧ ಕಟು ನಿಯಮಗಳನ್ನು ಕೈಗೊಳ್ಳುತ್ತಿದೆ, ಅಲ್ಲದೇ ಕಾಶ್ಮೀರದ ಕಣಿವೆಯಲ್ಲಿ ಪಾಪಿ ಪಾಕಿಸ್ತಾನದ ಉಪಟಳವನ್ನು ಹದ್ದು ಬದ್ದಿಸ್ಥಿನಲ್ಲಿಡಲೂ ಸೈನಿಕರ ಸೂಕ್ತ ಬಲ, ಸ್ಥೈರ್ಯ ನೀಡಿದೆ. ಆದ್ದರಿಂದಲೇ ಉಗ್ರರು ಸೇರಿ ಭಾರತಕ್ಕೆ ಕಿಟಲೆ ಮಾಡುವ ಪಾಕಿಸ್ತಾನದ ಸೈನಿಕರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನಿಂತಿವೆ ಈ ಸಂಖ್ಯೆಗಳು.
2017ರಲ್ಲೇ ಭಾರತ ಗಡಿಯಲ್ಲಿ ಅಕ್ರಮ ಪ್ರವೇಶ, ಕದನ ವಿರಾಮ ಉಲ್ಲಂಘನೆ, ವಿನಾಕಾರಣ ಗುಂಡಿನ ದಾಳಿ ಮಾಡಿದ 138 ಸೈನಿಕರನ್ನು ಭಾರತದ ಸೈನಿಕರು ಸ್ವರ್ಗವಾಸಿಗಳನ್ನಾಗಿ ಮಾಡಿದ್ದಾರೆ. ಲೈನ್ ಆಫ್ ಕಂಟ್ರೋಲ್ ಬಳಿಯಲ್ಲೇ 138 ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಇನ್ನು ಇದೇ ಅವಧಿಯಲ್ಲಿ ಭಾರತದ 28 ಯೋಧರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಕಾಶ್ಮೀರ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಬಹುತೇಕ ಪಾಕಿಸ್ತಾನ ಸರ್ಕಾರ ತನ್ನ ಸೈನಿಕರ ಸಾವನ್ನು ಒಪ್ಪಿಕೊಳ್ಳುವುದು, ಇಲ್ಲವೇ ಸೈನಿಕರ ಸಾವನ್ನು ನಾಗರೀಕರ ಸಾವು ಎಂದು ದಾಖಲೆ ತೋರಿಸುತ್ತದೆ. ಭಾರತದ ಸೈನ್ಯ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಮತ್ತು ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕಠಿಣ ಉತ್ತರ ನೀಡುತ್ತಿದೆ.
ಪಾಕಿಸ್ತಾನದ 138 ಸೈನಿಕರು ಮಾರಕ ದಾಳಿಗೆ ತುತ್ತಾಗಿದ್ದರೇ, 155 ಸೈನಿಕರಿಗೆ ಕದನ ವಿರಾಮ ಉಲ್ಲಂಘನೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗಳಾಗಿವೆ. ಭಾರತದ 70 ಸೈನಿಕರಿಗೆ ಗುಂಡಿನ ದಾಳಿಯಲ್ಲಿ ಗಾಯಗಳಾಗಿವೆ.
ಭಾರತದ ಪಾಕಿಸ್ತಾನದ ಎಲ್ಲ ಕದನ ವಿರಾಮ ಉಲ್ಲಂಘನೆಗಳಿಗೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಪಾಕಿಸ್ತಾನ ತನ್ನ ಚಾಳಿ ಮುಂದುವರಿಸಿದರೇ ಮುಂದೆಯೂ ತಕ್ಕ ಉತ್ತರ ನೀಡಲಾಗುವುದು ಎನ್ನುತ್ತಾರೆ ಕರ್ನಲ್ ಅಮನ್ ಆನಂದ.
860 ಬಾರಿ ಕದನ ವಿರಾಮ ಉಲ್ಲಂಘನೆ
ಪಾಕಿಸ್ತಾನದಿಂದ 2017ರಲ್ಲಿ 860 ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. 2016ರಲ್ಲಿ 221 ಬಾರಿ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಪಾಕಿಸ್ತಾನ ತನ್ನ ಸೈನಿಕರ ಸಾವನ್ನು ಒಪ್ಪಿಕೊಳ್ಳದಿರುವ ನೀತಿಯನ್ನು ಹೊಂದಿದೆ. ಭಾರತ ಸಾಕ್ಷ್ಯ ನೀಡಿದ್ದರೂ ತಗಾದೆ ತೆಗೆದಿರುವ ಉದಾಹರಣೆಗಳಿವೆ ಎನ್ನುತ್ತಾರೆ ಕರ್ನಲ್ ಅಮನ್ ಆನಂದ.
ಡಿಸೆಂಬರ್ ನಲ್ಲಿ ನಡೆದ ಭಾರತೀಯ ಸೈನಿಕರು ಪಾಕಿಸ್ತಾನದ ಗಡಿಯ ಒಳ ಹೊಕ್ಕು ಐದು ಪಾಕ್ ಸೈನಿಕರನ್ನು ಹತ್ಯೆ ಮಾಡಿ ಬಂದಿತ್ತು, ಆದರೆ ಪಾಕ್ ಸರ್ಕಾರ ಆ ಬಗ್ಗೆ ಟ್ವೀಟ್ ಮಾಡಿ ನಂತರ ಅದನ್ನು ಅಳಿಸಿ ಹಾಕಿತ್ತು.
Leave A Reply