ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಯೋಗಿ ಆದಿತ್ಯನಾಥರನ್ನು ನೋಡಿ ಅಪರಾಧ ನಿಯಂತ್ರಣ ಕಲಿಯಿರಿ!
ಲಖನೌ: ಮೊನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕರ್ನಾಟಕಕ್ಕೆ ಆಗಮಿಸುತ್ತಲೇ ಹೊಟ್ಟೆಯಲ್ಲಿ ಚೇಳು ಬಿಟ್ಟುಕೊಂಡಂತೆ ಆಡಿದ ಮುಖ್ಯಮಂತ್ರಿ ಸಿದ್ದರಾಮಯ್ಯವರು ಉತ್ತರ ಪ್ರದೇಶದ ಅಪರಾಧ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದರು. ಆ ಮೂಲಕ ತಮ್ಮ ಹೊಟ್ಟೆಯಲ್ಲಿದ್ದ ನಂಜು ಕಾರಿದರು.
ಆದರೆ 2017ರ ಮಾರ್ಚ್ 19ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರು ಅಧಿಕಾರ ಸ್ವೀಕರಿಸಿಕೊಂಡ ಇದುವರೆಗೆ 900ಕ್ಕೂ ಅಧಿಕ ಎನ್ ಕೌಂಟರ್ ಮಾಡಲಾಗಿದೆ. 31 ಭಯಂಕರ ರೌಡಿಗಳನ್ನು ಹತ್ಯೆ ಮಾಡಲಾಗಿದೆ ಎಂಬುದು ಮಾತ್ರ ನಮ್ಮ ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಕಳೆದ ಮಾರ್ಚ್ ನಿಂದ ಜನವರಿ 10ರವರೆಗೆ 900ಕ್ಕೂ ಅಧಿಕ ಎನ್ ಕೌಂಟರ್ ಮಾಡಿದ್ದು, ಇದರಲ್ಲಿ 920ಕ್ಕೂ ಅಧಿಕ ರೌಡಿಗಳನ್ನು ಗಾಯಗೊಳಿಸಿ ಅಪರಾಧ ಪ್ರಕರಣ ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ಬಳಿಕ 21 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಯೋಗಿ ಆದಿತ್ಯನಾಥರನ್ನೇ ಟೀಕಿಸಿದ್ದು ಅಣಕವೇ ಸರಿ.
Leave A Reply