ಅಯ್ಯಪ್ಪ ಮಾಲೆ ಧರಿಸಿದ್ದಕ್ಕೇ ಕ್ರಿಶ್ಚಿಯನ್ ಶಾಲೆಯ ಪರೀಕ್ಷೆಗೆ ವಿದ್ಯಾರ್ಥಿಯನ್ನು ಕೂರಿಸುವುದಿಲ್ಲವೆಂದರೆ…
ಹೈದರಾಬಾದ್: ಪ್ರಾಯಶಃ, ಧರ್ಮಾಂಧತೆಯ ಪರಾಕಾಷ್ಠೆ ಎಂದರೆ ಇದೇ ಇರಬೇಕು. ಹೈದರಾಬಾದ್ ನ ಚಿಕ್ಕಡ್ ಪಲ್ಲಿ ಎಂಬಲ್ಲಿಯ ಸೇಂಟ್ ಆ್ಯಡಮ್ಸ್ ಹೈ ಸ್ಕೂಲ್ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕ ವರ್ಗ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯು ಧಾರ್ಮಿಕ ನಂಬಿಕೆಯಿಂದ ಅಯ್ಯಪ್ಪ ಮಾಲೆ ಧರಿಸಿದ್ದು, ಕಾಲಿಗೆ ಬೂಟು ಸಹ ಧರಿಸದೆ ಪರೀಕ್ಷೆಗೆ ಹಾಜರಾಗಲು ಶಾಲೆಗೆ ಬಂದಿದ್ದಾನೆ. ಆಗ ಪರೀಕ್ಷೆ ಮೇಲ್ವಿಚಾರಕಿ ವಿದ್ಯಾರ್ಥಿಯನ್ನು ಒಳಗೆ ಬಿಟ್ಟಿಲ್ಲ ಎಂದು ತಿಳಿದುಬಂದಿದೆ.
ಇದರಿಂದ ನೊಂದ ವಿದ್ಯಾರ್ಥಿ ಶಾಲೆಯ ಹೊರಗಡೆ ಅಳುತ್ತ ನಿಂತಿದ್ದು, ಅಯ್ಯಪ್ಪ ಮಾಲೆ ಧರಿಸಿದ ಬೇರೆಯವರಿಗೆ ವಿಷಯ ತಿಳಿದಿದೆ. ಆಗ ಸ್ಥಳಕ್ಕೆ ಧಾವಿಸಿದ ಅಯ್ಯಪ್ಪ ಮಾಲಾಧಾರಿಗಳು ಶಾಲೆ ಆಡಳಿತ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಸಮವಸ್ತ್ರ ಧರಿಸದ ಕಾರಣಕ್ಕೇ ಪರೀಕ್ಷೆಗೆ ಹಾಜರಿಪಡಿಸದೇ ಇರುವುದು ಸರಿಯಲ್ಲ. ಸಣ್ಣ ಎಚ್ಚರಿಕೆ ನೀಡಿ ವಿದ್ಯಾರ್ಥಿಯನ್ನು ಹಾಜರುಪಡಿಸಬೇಕಿತ್ತು ಎಂದು ಹೈದರಾಬಾದ್ ಸಹೋದಯ ಸ್ಕೂಲ್ಸ್ ಕಾಂಪ್ಲೆಕ್ಸ್ (ಸಿಬಿಎಸ್ಇ) ಉಪಾಧ್ಯಕ್ಷೆ ಅಂಜಲಿ ರಜ್ದಾನ್ ಪ್ರಕರಣ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಿಕ್ಷಣ ಕೇಂದ್ರಗಳನ್ನು ಧರ್ಮಬೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದರೆ ಇಂಥಾ ಪ್ರಕರಣಗಳು ಬಿಟ್ಟರೆ ಮತ್ತಾವ ನಿರೀಕ್ಷೆ ಸಾಧ್ಯ. ಕ್ರಿಶ್ಚಿಯನ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮುನ್ನ ಎಚ್ಚರವಿರಲಿ.
Leave A Reply