ಹೆಚ್ಚಿನ ಮಕ್ಕಳನ್ನು ಹಡೆದರೆ ಸಹಾಯಧನ ನೀಡುವುದಾಗಿ ಘೋಷಿಸಿದ ಚರ್ಚ್
ಮಿಝೋರಾಮ್: ಭಾರತ ಸೇರಿ ಹಲವು ದೇಶಗಳಲ್ಲಿ ಮುಸ್ಲಿಮರು ಎಷ್ಟು ಮಕ್ಕಳನ್ನಾದರೂ ಹೆರಲಿ ಎಂಬ ನಿಯಮವಿದೆ. ಆದರೆ ಇದು ಈಗ ಕ್ರಿಶ್ಚಿಯನ್ನರಿಗೂ ಅನ್ವಯವಾಗುವಂತಿದ್ದು, ಹೆಚ್ಚು ಜನರನ್ನು ಹೆತ್ತರೆ ಆ ಮಗುವಿಗೆ ಪ್ರೋತ್ಸಾಹ ಧನ ನೀಡುವುದಾಗಿ ಚರ್ಚ್ ಒಂದು ಘೋಷಿಸಿದೆ.
ಹೌದು, ಮಿಝೋರಾಮ್ ನ ಲುಂಗ್ಲೀಸ್ ಬಜಾರ್ ವೆಂಗ್ ಎಂಬ ಪ್ರದೇಶದ ಸ್ಥಳೀಯ ಬ್ಯಾಪಿಸ್ಟ್ ಚರ್ಚ್ ಈ ಘೋಷಣೆ ಹೊರಡಿಸಿದ್ದು, ಚರ್ಚ್ ಸದಸ್ಯರು ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದೆ.
ಯಾವುದೇ ದಂಪತಿಗೆ ಜನಿಸುವ ನಾಲ್ಕನೇ ಮಗುವಿಗೆ ಪ್ರೋತ್ಸಾಹ ಧನವಾಗಿ ನಾಲ್ಕು ಸಾವಿರ ರುಪಾಯಿ ಹಾಗೂ ಐದನೇ ಮಗುವಿಗೆ ಐದು ಸಾವಿರ ರುಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಣೆ ಹೊರಡಿಸಿದೆ.
ಕಳೆದ ವರ್ಷವೇ ಚರ್ಚ್ ಸಮಿತಿ ಸದಸ್ಯರು ಒಮ್ಮತದಿಂದ ಪ್ರೊತ್ಸಾಹ ಧನ ನೀಡಲು ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳಿಂದಲೇ ಜನಿಸಿದ ಮಕ್ಕಳಿಗೆ ಹಣ ನೀಡಲಾಗುವುದು ಎಂದು ಚರ್ಚ್ ಕಾರ್ಯದರ್ಶಿ ಸಿ.ಬೈಕ್ ಚುಂಗುಂಗಾ ತಿಳಿಸಿದ್ದಾರೆ.
ಆದರೆ ಕ್ರೈಸ್ತ ಮತ ಪ್ರಚಾರಕ್ಕಾಗಿ ಚರ್ಚ್ ಆಡಳಿತ ಮಂಡಳಿ ಈ ತೀರ್ಮಾನಕ್ಕೆ ಬಂದಿದ್ದು, ಸರ್ಕಾರ ಕೂಡಲೇ ಈ ಕ್ರಮ ನಿಲ್ಲಿಸಬೇಕು ಹಾಗೂ ಯಾರೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರದಂತೆ ಆದೇಶ ಹೊರಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Leave A Reply