ಟ್ವಿಟರ್ ನಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದ ಯೋಗಿ ಅವರಿಗೆ ಮೋದಿ ಮೆಚ್ಚುಗೆ
ದೆಹಲಿ: ಬಿಜೆಪಿಯ ನವಕರ್ನಾಟಕ ಯಾತ್ರೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆಗಮಿಸಿದ್ದಾಗ ಆದಿತ್ಯನಾಥರನ್ನು ಟೀಕಿಸಿದ್ದಕ್ಕೆ ಟಾಂಗ್ ನೀಡಿದ್ದ ಯೋಗಿ ಅವರ ಟ್ವಿಟರ್ ಕೌಶಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದ ಯೋಗಿ ಆದಿತ್ಯನಾಥರ ಕೌಶಲ ಶ್ಲಾಘಿಸಿದ ಮೋದಿ ಅವರು, “ಟ್ವಿಟರ್ ಕಾ ಖೇಲ್ (ಟ್ವಿಟರ್ ಆಟ)ನಲ್ಲಿ ಯೋಗಿ ಆದಿತ್ಯನಾಥರು ಕೂಡ ಕಡಿಮೆ ಕಿಲಾಡಿಯೇನಲ್ಲ” ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
ಆದಿತ್ಯನಾಥರು ಕರ್ನಾಟಕಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಗತಿಸುವ ನೆಪದಲ್ಲಿ ಉತ್ತರ ಪ್ರದೇಶದ ಅಪರಾಧ ಪ್ರಕರಣಗಳ ಬಗ್ಗೆ ಟೀಕಿಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಒಂದೂ ಗಲಭೆಯಾಗಿಲ್ಲ ಎಂದಿದ್ದರು.
ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯನವರು, “ನಾನೂ ಹಿಂದು. ನಾನೂ ಹಸುಗಳನ್ನು ಸಾಕಿದ್ದೇನೆ, ಸೆಗಣಿಯನ್ನೂ ಎತ್ತಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.
ಇದಕ್ಕೂ ಕೌಂಟರ್ ನೀಡಿದ್ದ ಯೋಗಿ ಆದಿತ್ಯನಾಥರು, “ನೀವು ನಿಜವಾಗಿಯೂ ಹಿಂದು ಆಗಿದ್ದರೆ, ಗೋಹತ್ಯ ನಿಷೇಧಿಸಿ” ಎಂದು ಸವಾಲು ಹಾಕಿದ್ದರು. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯೋಗಿ ಆದಿತ್ಯನಾಥರು ಟ್ವಿಟರ್ ನಲ್ಲಿ ಟಾಂಗ್ ನೀಡಿದ್ದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave A Reply