ಪಂಜಾಬ್ ಹಿಂದೂ ಮುಖಂಡರ ಹತ್ಯೆಯಲ್ಲಿ ಪಾಕಿಸ್ತಾನಿ ಐಎಸ್ ಐ ಖಲಿಸ್ತಾನ್ ಅಜೆಂಡಾ: ಎನ್ ಐಎ
ದೆಹಲಿ: ಭಾರತದ ನೆಮ್ಮದಿಗೆ ಸದಾ ಕೊಳ್ಳಿ ಇಡುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ತನ್ನ ಕೊಳಕು ನೀತಿ ಪ್ರದರ್ಶಿಸಿರುವುದು ಬಹಿರಂಗವಾಗಿದೆ. ಪಂಜಾಬ್ ನಲ್ಲಿ ನಡೆದ 6 ಹಿಂದೂ ಮುಖಂಡರ ಹತ್ಯೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾಗಿಯಾಗಿದ್ದು, ಖಲಿಸ್ತಾನದ ಉಗ್ರರನ್ನಿಟ್ಟುಕೊಂಡು ಭಾರತದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಎನ್ಐಎ ತಿಳಿಸಿದೆ.
ಪಂಜಾಬ್ ನಲ್ಲಿ ನಡೆದ 6 ಹಿಂದೂ ಮುಖಂಡರ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿಗಳು, ಆಯುದ್ಧಗಳಲ್ಲಿ ಸಾಮೀಪ್ಯವಿದೆ. ಇದನ್ನು ಎನ್ಐಎ ವೈಜ್ಞಾನಿಕವಾಗಿ ಸಾಬೀತುಪಡಿಸುತ್ತದೆ. ಎಲ್ಲ ಕೊಲೆಗಳ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ಕೂಡ ಸಾಬೀತಾಗಿದೆ ಎಂದು ಎನ್ಐಎ ಮಹಾ ನಿರ್ದೇಶಕ ವಾಯ್ ಸಿ ಮೋದಿ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ ಆರು ಕೊಲೆಗಳಲ್ಲಿ ಬೇರೆ ಬೇರೆ ಅಸ್ತ್ರಗಳನ್ನು ಹೊರತುಪಡಿಸಿದರೆ ಮೊಬೈಲ್ ಕರೆಗಳಿಗೆ ಸಂಬಂಧಿಸಿದಂತೆ ಎಲ್ಲ ಕರೆಗಳಲ್ಲಿ ಸಾಮಿಪ್ಯವಿದೆ ಎಂದು ತಿಳಿದು ಬಂದಿದೆ. ಹತ್ಯೆ ಆರೋಪದಲ್ಲಿ ಬಂಧಿಸಲಾಗಿರುವ ರಾಮದೀಪ್ ಸಿಂಗ್ ಮತ್ತು ಹರ್ದೀಪ್ ಶೇರಾ ವಿಚಾರಣೆಯಲ್ಲೂ ಪಾಕಿಸ್ತಾನದಿಂದ ಹಿಂದೂ ಮತ್ತು ಬಿಜೆಪಿ ಮುಖಂಡರ ಹತ್ಯೆಗೆ ಪಿತೂರಿ ನಡೆಸಿರುವ ಮಾಹಿತಿ ಹೊರಬಿದ್ದಿದೆ.
ಇಟಲಿ, ಪಾಕಿಸ್ತಾನ ಮತ್ತು ಬ್ರಿಟನ್ ನಿಂದ ಈ ಕಾರ್ಯಾಚರಣೆಗೆ ಹಣ ಪೂರೈಸಲಾಗಿದೆ ಎಂಬ ಮಾಹಿತಿ ಶಂಕಿತರಿಂದ ತಿಳಿದು ಬಂದಿದೆ. ಅಲ್ಲದೇ ಹವಾಲಾ ದಂದೆ ನಡೆಸುವವರಿಂದ ದೇಶದಲ್ಲಿ ಭಯೋತ್ಪಾದಕರಿಗೆ ಪೂರೈಸಲಾಗುತ್ತಿದೆ ಎನ್ನಲಾಗುತ್ತಿದೆ.
ಪಂಜಾಬ್ ನಲ್ಲಿ ನಡೆದ ಹಿಂದೂ ಮುಖಂಡರ ಕೊಲೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಇಟಲಿ, ಯುಕೆ, ಯುಎಇ ಮತ್ತು ಫ್ರಾನ್ಸ್ ನಲ್ಲಿ ತನಿಖೆ ನಡೆಸುವ ಅಥವಾ ತನಿಖೆ ನಡೆಸುವ ಸಾಧ್ಯತೆಗಳಿವೆ.
ಹಿಂದೂ ಸಂಘಟನೆಳ ಮುಖಂಡರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಗದೀಶ್ ಗಗ್ನೆಜಾ, ಪಂಜಾಬ್ ಶಿವಸೇನೆ ಕಾರ್ಮಿಕ ವಿಭಾಗದ ಮುಖ್ಯಸ್ಥ ದುರ್ಗಾ ಪ್ರಸಾದ್ ಗುಪ್ತಾ, ಹಿಂದೂ ಮುಖಂಡ ಅಮಿತ್ ಶರ್ಮಾ, ಡೇರಾ ಸಚ್ಚಾ ಸೌದಾ ಬೆಂಬಲಿಗ ಸತ್ಪಾಲ್ ಕುಮಾರ ಮತ್ತು ಮಗ ರಮೇಶ್ ಕುಮಾರ, ಲುಧಿಯಾನ ಮೂಲದ ಆರ್ ಎಸ್ ಎಸ್ ಮುಖಂಡ ರವಿಂದರ್ ಗೋಸಾನ ಅವರನ್ನು ಹತ್ಯೆ ಮಾಡಲಾಗಿತ್ತು.
Leave A Reply