ಕರಕುಶಲ ಮೇಳದಲ್ಲಿ ಮುಸ್ಲಿಮರಿಂದ ಪಾಕ್ ಪರ ಘೋಷಣೆ, ಒಬ್ಬನ ಬಂಧನ
ಜೈಪುರ: ರಾಜಸ್ಥಾನದಲ್ಲಿ ಕೆಲವು ಮುಸ್ಲಿಂ ಮೂಲಭೂತವಾದಿಗಳ ಉಪಟಳ ಹಾಗೂ ಜಮ್ಮು-ಕಾಶ್ಮೀರದಲ್ಲಿ ನಡೆದ ಮಾದರಿಯಲ್ಲಿ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಈ ಸಂಬಂಧ ಒಬ್ಬನನ್ನು ಬಂಧಿಸಿದ್ದಾರೆ.
ಕಳೆದ 15 ದಿನಗಳಿಂದ ರಾಜಸ್ಥಾನದ ಜುಂಝುನು ಜಿಲ್ಲೆಯ ಉದಯ್ ಪುರ್ವಾತಿ ಪಟ್ಟಣದಲ್ಲಿ ಕರಕುಶಲ ವಸ್ತುಗಳ ಮೇಳ ನಡೆಯುತ್ತಿದ್ದು, ಜನವರಿ 7ರಂದು ಮುಸ್ಲಿಂ ವ್ಯಕ್ತಿಯೊಬ್ಬ ಮೇಳದಲ್ಲಿ ಗಲಾಟೆ ನಡೆಸಿದ್ದು, ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ಆರೀಫ್ ಎಂದು ಗುರುತಿಸಲಾಗಿದೆ.
ಆದರೆ ತಪ್ಪು ಮುಸ್ಲಿಂ ವ್ಯಕ್ತಿಯದಿದ್ದರೂ, ಪೊಲೀಸರು ಆತನನ್ನು ಬಂಧಿಸಿದ ಕಾರಣ ಆಕ್ರೋಶಗೊಂಡ ಕೆಲ ಮುಸ್ಲಿಮರ ತಂಡ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಅಲ್ಲದೆ ಆರೋಪಿಯನ್ನು ಬಿಡುಗಡೆ ಮಾಡುವಂತೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವೇಗ ಪಡೆದುಕೊಂಡ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಜತೆಗೆ ಬಜರಂಗದಳ ಸಂಘಟನೆಯ ಮುಖಂಡ ರೋಹಿತಾಶ್ ಸೈನಿ ಎಂಬುವರ ಮೇಲೂ ಮುಸ್ಲಿಮರ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಬಂಧಿತ ಆರೀಫನಿಂದ ಕಂಟ್ರಿ ಪಿಸ್ತೂಲ್ ಒಂದನ್ನು ವಶಪಡಿಸಿಕೊಂಡಿದ್ದು, ಮುಸ್ಲಿಮರ ತಂಡದಲ್ಲಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಂದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಹಾಗೂ ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಪೊಲೀಸರು ಸುಮಾರು 21 ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಕರಕುಶಲ ವಸ್ತುಗಳ ಮೇಳದಲ್ಲಿ ಮುಸ್ಲಿಂ ವ್ಯಕ್ತಿಯೇಕೆ ದಾಳಿ ಮಾಡಬೇಕು? ಏಕೆ ಸುಖಾಸುಮ್ಮನೆ ಗಲಭೆ ನಡೆಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply