ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪರಿಗೆ ಕೊಟ್ಟ ಬಾಲಕಿಯರ ಪತ್ರದಲ್ಲಿ ಏನಿದೆ ಗೊತ್ತಾ?
ಚಾಮರಾಜನಗರ: ರಾಜ್ಯದ 210ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಅಲೆ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅದೇ ರೀತಿ, ಚಾಮರಾಜನಗರದದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ವೇದಿಕೆಗೆ ಆಗಮಿಸಿದ ಎಂಟು ವರ್ಷದ ಬಾಲಕಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ನೀಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ನೀವು ಮಾತನಾಡಿ ಎಂದು ಉಲ್ಲೇಖಿಸಿದ್ದಾರೆ.
ಕುಮಾರ, ಐಶ್ವರ್ಯ ಹಾಗೂ ಪ್ರೀತಿ ಎಂಬ ಒಬ್ಬ ಬಾಲಕ ಹಾಗೂ ಇಬ್ಬರು ಬಾಲಕಿಯರು ಪತ್ರ ಬರೆದಿದ್ದು, ಅದನ್ನು ಯಡಿಯೂರುಪ್ಪ ಅವರು ವೇದಿಕೆ ಮೇಲೆಯೇ ಓದಿ ಜನರಿಗೆ ತಿಳಿಸಿದ್ದಾರೆ.
“ರಾಜ್ಯ ಸರ್ಕಾರ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿಯವರಾದ ನೀವು ಸಮಾವೇಶಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಬೇಕು. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಬಹಿರಂಗಪಡಿಸಬೇಕು. ಅಲ್ಲದೆ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರೊಬ್ಬರ ಪುತ್ರರು ನಡೆಸಿದ ಅವ್ಯವಹಾರದ ಕುರಿತು ಜನರಿಗೆ ತಿಳಿಸಬೇಕು” ಎಂದು ಬಾಲಕ, ಬಾಲಕಿಯರು ಆಗ್ರಹಿಸಿದ್ದಾರೆ ಎಂದು ಯಡಿಯೂರಪ್ಪನವರು ಸಮಾವೇಶದ ವೇಳೆಯೇ ಓದಿ ಜನರಿಗೆ ತಿಳಿಸಿದ್ದಾರೆ.
Leave A Reply