ಪಾಕ್ ಬಡತನ ನಿರ್ಮೂಲನೆಗೆ ಮೋದಿ ಸಲಹೆ ಪಡೆಯಲಿ: ಮಹೆಬೂಬಾ ಮುಫ್ತಿ
ಕಾಶ್ಮೀರ: ಸದಾ ಭಾರತದ ವಿರುದ್ಧ ಕಿಡಿ ಕಾರುತ್ತಾ, ಹಲ್ಲು ಮಸೆದು, ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ತನ್ನ ಬಡತನದ ದಾರಿದ್ರ್ಯವನ್ನು ನಿರ್ಮೂಲನೆ ಮಾಡಲು ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ, ಕಾರ್ಯಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮಹೆಬೂಬಾ ಮುಫ್ತಿ ಸಲಹೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಇಸ್ಲಾಮಾಬಾದ್ ನಲ್ಲಿ ಕುಳಿತು ಪಾಕಿಸ್ತಾನದ ಆಡಳಿತವನ್ನು ನಡೆಸುತ್ತಿರುವವರು ಪಾಕಿಸ್ತಾನದ ಬಡತನ ನಿರ್ಮೂಲನೆ ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪರಸ್ಪರ ಎರಡು ರಾಷ್ಟ್ರಗಳು ಸಹಕಾರದೊಂದಿಗೆ ಸಾಗಬೇಕು, ಬಡತನ ನಿರ್ಮೂಲನೆ ಮಾಡಲು ಸಹಕಾರ, ಸಲಹೆ ಪಡೆದು ಮುಂದೆ ಸಾಗಬೇಕು. ಬಾಂಬ್, ಬಂಕರ್ ಕೊನೆಯವರಿಗೆ ಉಳಿಯುದಿಲ್ಲ. ಅದು ಶಾಶ್ವತ ಪರಿಹಾರವೂ ಅಲ್ಲ ಎಂದು ಹೇಳಿದರು.
ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಕುರಿತು ಗದ್ದಲವೆಬ್ಬಿಸಿದ್ದವು. ಜ.21ರಂದು ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಉಂಟಾದ ಗುಂಡಿನ ಚಕಮಕಿ, ಸಾರ್ವಜನಿಕರ ಮತ್ತು ಸೈನಿಕರ ಸಾವಿನ ಕುರಿತು ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಗಡಿಯಲ್ಲಿ ಜನರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಗದ್ದಲವೆಬ್ಬಿಸಿದವು.
Leave A Reply