ಪೋಷಕರೇ ಲವ್ ಜಿಹಾದ್ ಎಂದರೂ ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ, ಇದು ಕರ್ನಾಟಕದ್ದೇ ಕತೆ!
ಮೈಸೂರು: ಕರ್ನಾಕಟವೂ ಲವ್ ಜಿಹಾದ್ ಹಾಗೂ ಹಿಂದೂಗಳ ಹತ್ಯೆ ವಿಷಯದಲ್ಲಿ ಮತ್ತೊಂದು ಕೇರಳವಾಗಿ ಪರಿಣಮಿಸುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಮೈಸೂರಿನಲ್ಲಿ ಲವ್ ಜಿಹಾದ್ ಎಂದು ಶಂಕಿಸಲಾಗಿರುವ ಪ್ರರಕಣವೊಂದು ಬೆಳಕಿಗೆ ಬಂದಿದೆ.
ಹೌದು, ಜೈನ್ ಸಮುದಾಯದ ಸವಿತಾ (21) (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯು ಮಂಡಿ ಮೊಹಲ್ಲಾದ ಮುಸ್ಲಿಂ ವ್ಯಕ್ತಿ ಅಬ್ದುಲ್ ನಾಸೀರ್ ನೊಂದಿಗೆ ಓಡಿ ಹೋಗಿದ್ದು, ಇದು ಲವ್ ಜಿಹಾದ್ ಎಂದು ಪೋಷಕರು ದೂರಿದರೂ ಸಹ ಪೊಲೀಸರು ಪ್ರಕರಣ ದಾಖಲಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೈಸೂರಿನ ದೇವಾನ್ಸ್ ರಸ್ತೆಯಲ್ಲಿ ವಾಸವಾಗಿರುವ ಜಯಂತಿ ಲಾಲ್ ಎಂಬುವವರು ಮುಸ್ಲಿಂ ಯುವಕ ನನ್ನ ಮಗಳ ತಲೆಕೆಡಿಸಿದ್ದು, ಡ್ರಗ್ಸ್ ಸೇವನೆ ಮಾಡುವಂತೆ ಮಾಡಿ ಅವಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಇಷ್ಟಾದರೂ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಮುಸ್ಲಿಂ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಇನ್ನಾದರೂ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಮೈಸೂರಿನಲ್ಲಿ ಪದೇಪದೆ ಸುದ್ದಿಯಾಗುತ್ತಿದ್ದು, ಹಿಂದೂ ಯುವತಿಯರು ಎಚ್ಚರದಿಂದ ಇರುವುದು ಒಳಿತು. ಪೋಷಕರು ತಮ್ಮ ಮಕ್ಕಳ ಮೇಲೆ ಒಂದು ಕಣ್ಣಿಟ್ಟರೆ ಒಳ್ಳೆಯದು.
Leave A Reply