ನಡೆಯಲಿಲ್ಲ ಕಮ್ಯುನಿಸ್ಟ್ ಸರ್ಕಾರದ ಸರ್ವಾಧಿಕಾರ, ಮೋಹನ್ ಭಾಗವತ್ ಕೇರಳದಲ್ಲಿ ಧ್ವಜಾರೋಹಣ!
ತಿರುವನಂತಪುರ: ಕೇರಳದಲ್ಲಿ ಕಳೆದ ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖಂಡ ಮೋಹನ್ ಭಾಗವತ್ ಅವರು ಧ್ವಜಾರೋಹಣ ಮಾಡಬಾರದು ಎಂದು ಆದೇಶ ಹೊರಡಿಸಿದ್ದ ಸಿಪಿಎಂ ಸರ್ಕಾರಕ್ಕೆ ಈ ಬಾರಿಯೂ ಮೋಹನ್ ಭಾಗವತ್ ಸವಾಲೊಡ್ಡಿದ್ದು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ್ದಾರೆ.
ಕೇರಳದ ಪಲಕ್ಕಾಡ್ ಎಂಬಲ್ಲಿನ ಕರ್ಣಕೈಯಮ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಮೋಹನ್ ಭಾಗವತ್ ಬೆಳಗ್ಗೆ ಧ್ವಜಾರೋಹಣ ಮಾಡಿದ್ದು, ಕೊನೆಗೂ ಹೇಳಿದಂತೆಯೇ ನಡೆದುಕೊಂಡಿದ್ದಾರೆ.
ಕಳೆದ ಬಾರಿಯೂ ಮೋಹನ್ ಭಾಗವತ್ ಗಣರಾಜ್ಯೋತ್ಸವದಂದು ಶಾಲೆಯೊಂದರಲ್ಲಿ ಭಾರತದ ಧ್ವಜಾರೋಹಣ ಮಾಡಿದ್ದಕ್ಕೆ ಕೇರಳ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ ಭಾರತೀಯನಾಗಿ ಭಾರತದ ಧ್ವಜಾರೋಹಣ ಮಾಡುವುದರಲ್ಲಿ ತಪ್ಪೇನು ಎಂದು ಮೋಹನ್ ಭಾಗವತ್ ತಿರುಗೇಟು ನೀಡಿದ್ದರು.
ಈ ಬಾರಿಯೂ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಆಡಳಿತ ಮಂಡಳಿ ಅಥವಾ ಸಿಬ್ಬಮದಿ ಮಾತ್ರ ಧ್ವಜಾರೋಹಣ ಮಾಡಬೇಕು ಎಂದು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಮೋಹನ್ ಭಾಗವತ್ ಅವರು ಭಾರತದ ಧ್ವಜಾರೋಹಣ ಮಾಡಿದ್ದಾರೆ.
ಹಾಗಾದರೆ ಧ್ವಜಾರೋಹಣ ಮಾಡುವುದು ತಪ್ಪಾ?
ಇಂದು ದೇಶದ ಹಲವು ರಾಜ್ಯಗಳ ಹಳ್ಳಿಗಳಲ್ಲಿ ಊರಿನ ಗಣ್ಯರು, ಶಾಲೆಗೆ ಭೂಮಿ ನೀಡಿದವರು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವ ಸಂಪ್ರದಾಯವಿದೆ. ಅಷ್ಟಕ್ಕೂ ಸರ್ಕಾರಿ ಸಿಬ್ಬಂದಿಯೇ ಧ್ವಜಾರೋಹಣ ಮಾಡಬೇಕು ಎಂಬ ನಿಯಮವಿಲ್ಲ. ಹೀಗಿರುವಾಗ ಸರ್ವಾಧಿಕಾರಿ ಮನೋಭಾವನೆಯ ಸಿಪಿಎಂ ಸರ್ಕಾರ ಮೋಹನ್ ಭಾಗವತ್ ಅವರಿಗೆ ಭಾರತದ ಧ್ವಜ ಹಾರಿಸುವುದನ್ನು ತಪ್ಪಿಸಲು ಇಲ್ಲಸಲ್ಲದ ಅಧಿಸೂಚನೆ ಹೊರಡಿಸಿದೆ. ಹೇಳಿ ಭಾರತದ ಪ್ರಜೆಯಾಗಿ, ಭಾರತದ ಧ್ವಜ ಹಾರಿಸುವುದು ತಪ್ಪಾ?
Leave A Reply