ಹುಣಸೂರಿನಲ್ಲಿ ಹಾರಿತು ಭಗವಾ ಧ್ವಜ, ಹನುಮ ಜಯಂತಿ ಅದ್ದೂರಿ ಮೆರವಣಿಗೆ ಆರಂಭ
ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುತಂತ್ರದಿಂದ ಯುವ ಸಮುದಾಯಕ್ಕೆ ಮಾದರಿಯಾಗಿರುವ, ರಾಮ ಭಕ್ತ ಹನುಮ ಜಯಂತಿ ಆಚರಣೆಗೆ ವಿರೋಧಿಸಿ ತಡೆ ಒಡ್ಡಲಾಗಿತ್ತು. ಸಿದ್ದರಾಮಯ್ಯನವರ ಸರ್ಕಾರ ಇಡೀ ಆಡಳಿತ ವ್ಯವಸ್ಥೆಯನ್ನು ದುರುಪಯೋಗ ಪಡೆಸಿಕೊಂಡು ಹನುಮ ಜಯಂತಿ ಮೆರವಣಿಗೆಗೆ ತಡೆ ಒಡ್ಡಿತು.
ಇಂದು ನ್ಯಾಯಕ್ಕೆ ಜಯ ದೊರೆತ್ತಿದ್ದು, ನೀತಿ ನಿಯಮಗಳ ಪ್ರಕಾರವೇ ಜಿಲ್ಲಾಧಿಕಾರಿ ರಂದೀಪ್ ಅನುಮತಿಯಲ್ಲೇ ಹುಣಸೂರಿನಲ್ಲಿ ಅದ್ದೂರಿ ಹನುಮ ಜಯಂತಿ ಮೆರವಣಿಗೆ ಆರಂಭವಾಗಿದೆ. ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಸಹಸ್ರಾರು ಹನುಮ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿ, ರಾಮ, ಹನುಮ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಪರವಶರಾಗಿದ್ದಾರೆ.
ಹುಣಸೂರಿನ ಕಲ್ಕುಣಿಕೆ ರಸ್ತೆಯ ತುಂಬ ಸುಮಾರು 20 ಸಾವಿರ ಭಕ್ತರು ಭಾಗವಹಿಸಿದ್ದು, ತಮಟೆ, ನಗಾರಿ, ಹನುಮನ ಜೈಕಾರದ ಮಧ್ಯೆ ರಂಗನಾಥ ಬಡಾವಣೆ ಮಿಂದೆದ್ದಿದೆ. ಶ್ರೀರಾಮನ ಜಪ ಮಾಡುತ್ತಾ ಅದ್ದೂರಿ ಮೆರವಣಿಗೆಗೆ ಚಾಲನೆ ದೊರೆತಿದ್ದು, ಶಾಂತಿಯುತವಾಗಿ ಮೆರವಣಿಗೆ ನಡೆಯಿತು.
ಗೆದ್ದ ಹನುಮ ಭಕ್ತರ ಶಕ್ತಿ, ಸೋತ ಸಿದ್ದರಾಮಯ್ಯರ ಷಡ್ಯಂತ್ರ
ಹುಣಸೂರಿನಲ್ಲಿ ಹಿಂದೆಯೇ ಹನುಮ ಜಯಂತಿ ಆಚರಣೆಗೆ ಸಿಎಂ ಸಿದ್ದರಾಮಯ್ಯ ಹಿಂಬಾಗಿಲ ಮೂಲಕ ತಡೆ ಒಡ್ಡಿದ್ದರು. ಶಾಂತಿಗೆ ಭಂಗ ಎಂದು ನೆಪ ಹೇಳಿ ಜನರ ಭಾವನೆಗಳಿಗೆ ಘಾಸಿ ಮಾಡಿದ್ದರು. ಅನುಮತಿ ಪಡೆದರೂ ಕೂಡ ಆಡಳಿತಾಂಗವನ್ನು ದುರುಪಯೋಗ ಪಡೆಸಿಕೊಂಡು ಸಿದ್ದರಾಮಯ್ಯ ಸರ್ಕಾರ ಹನುಮ ಜಯಂತಿ ಆಚರಣೆಗೆ ತಡೆ ಒಡ್ಡಿತ್ತು. ಇದರಿಂದ ಸಹಸ್ರಾರು ಹಿಂದೂಗಳ ಮನಸ್ಸಿಗೆ ಘಾಸಿ ಉಂಟಾಗಿತ್ತು. ಸಂಸದ ಪ್ರತಾಪ ಸಿಂಹರನ್ನು ಅಸಂವಿಧಾನಿಕವಾಗಿ ನಡೆಸಿಕೊಂಡು ಸಿದ್ದರಾಮಯ್ಯ ಸರ್ಕಾರ ಧರ್ಪ ಮೆರೆದಿತ್ತು. ಆದರೆ ಇದೀಗ ಸೂಕ್ತ ಅನುಮತಿಯೊಂದಿಗೆ ಹನುಮ ಜಯಂತಿ ಮುಂದುವರಿದಿದೆ.
Leave A Reply