ಹಡೆದವ್ವನ ಶಾಪಕ್ಕೆ ತತ್ತರಿಸಿ ಹೋಗುವವರು ಯಾರು?
ಪಿ.ಎಫ್.ಐ. ಮುಸ್ಲಿಂ ಸಂಘಟನೆಯ ರಕ್ತ ದಾಹಕ್ಕೆ ಬಲಿಯಾದವರು ಹಲವು ಹಿಂದೂ ಕಾರ್ಯಕರ್ತರು. ಅದರಲ್ಲಿ ಬಾಳಿ ಬದುಕಬೇಕಿದ್ದ ದೀಪಕ್ ಹಾಗೂ ಪರಮೇಶ್ ಮೇಸ್ತಾ ನಂತವರು, ಮನೆಗೆ ಆಧಾರ ಸ್ತಂಭವಾಗಿದ್ದ ಶರತ್ ಮಡಿವಾಳ ಹಾಗೂ ಪ್ರಶಾಂತ್ ಪೂಜಾರಿಯಂತವರು, ಬದುಕಿನ ಮುಸ್ಸಂಜೆಯಲ್ಲಿದ್ದ ಕುಟ್ಟಪ್ಪನವರಂತವರು, ಹೀಗೆ ಎಲ್ಲ ವರ್ಗದವರೂ ಇದ್ದಾರೆ.
ಪೊಲೀಸ್ ವ್ಯವಸ್ಥೆ ಕಷ್ಟಪಟ್ಟು ಕೊಲೆಗಡುಕರನ್ನ ಬಂಧಿಸಿ ಜೈಲಿಗಟ್ಟಿದರೂ ಆಳುವ ವರ್ಗವೇ ಕೊಲೆಗಡುಕರ ರಕ್ಷಣೆಗೆ ನಿಂತು ಬಿಡುಗಡೆಯ ಭಾಗ್ಯ ಕರುಣಿಸಲು ಟೊಂಕ ಕಟ್ಟಿ ನಿಂತಿದೆ. ಹಾಗಿರುವಾಗ ನ್ಯಾಯದ ನಿರೀಕ್ಷೆ ಇಟ್ಟುಕೊಳ್ಳುವುದಾದರೂ ಹೇಗೆ? ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಧ್ವನಿಯಿಲ್ಲದ ಬಡಪಾಯಿ ಕುಟುಂಬಗಳಿಗೆ, ಹಡೆದ ತಾಯಂದಿರಿಗೆ ಉಳಿಯುವುದು ಕಣ್ಣೀರು ಹಾಕಿ ಶಾಪ ಹಾಕುವುದೊಂದೇ. ಅದೇ ಹಡೆದವ್ವನ ಶಾಪ!ಅಮಾಯಕ ದೀಪಕ್ ರಾವ್ ಕಗ್ಗೊಲೆಯ ನಂತರ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ “ಹಡೆದವ್ವನ ಶಾಪ” ಅಭಿಯಾನ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ಹಿಂದೂ ವಿರೋಧಿಗಳಿಗೂ ಬಿಸಿ ಮುಟ್ಟಿಸಿತ್ತು. ಮಕ್ಕಳನ್ನು ಕಳೆದುಕೊಂಡ ತಾಯಂದಿರು ಹಾಕಿದ ಕಣ್ಣೀರಿನ ಶಾಪ ಕೊಲೆಗಡುಕರ ಜೊತೆಗೆ ಕೊಲೆಗಡುಕರನ್ನು ಬೆಂಬಲಿಸಿದವರಿಗೂ ತಟ್ಟಲಿದೆ, ಮತ್ತು ತಟ್ಟಲೇಬೇಕು.
ಈ ಕುರಿತ ಕಾರ್ಯಕ್ರಮ ಇದೇ ಜನವರಿ 28ರ ಭಾನುವಾರ (ನಾಳೆ) ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಟಿ.ವಿ.ರಮನ ಪೈ ಹಾಲ್ ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಯ ಬಗೆಗಿನ “ಹಡೆದವ್ವನ ಶಾಪ” ಎಂಬ ಪುಸ್ತಕವೂ ಬಿಡುಗಡೆಯಾಗಲಿದೆ.
ವೇದಿಕೆಯಲ್ಲಿ ಯುವಾಬ್ರಿಗೇಡ್ ರಾಜ್ಯ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ, ವಿಶ್ವ ಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ಬಜರಂಗ ದಳ ಮುಖಂಡ ಶರಣ್ ಪಂಪ್’ವೆಲ್, ಹಿಂದೂ ಜಾಗರಣ ವೇದಿಕೆಯ ರಾಧಾಕೃಷ್ಣ ಅಡ್ಯಂತಾಯ, ರಾಜ್ಯ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಉಪಸ್ಥಿತರುವರು
Leave A Reply